6

ಮಹಿಳೆಯನ್ನು ಮದುವೆಯಾದ ಮಹಿಳೆ!

ಉತ್ತಮ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಅನಾಧಿಕಾಲದಿಂದಲೂ ಹಾಲಕ್ಕಿ ಒಕ್ಕಲಿಗರಲ್ಲಿ ಮಹಿಳೆಯೊಂದಿಗೆ ಮಹಿಳೆಯನ್ನು ಮದುವೆ ಮಾಡುವ ಆಚರಣೆಯಿದ್ದು, ಭಾನುವಾರ ಸಂಜೆಯ ಮುಹೂರ್ತದಲ್ಲಿ ಇಬ್ಬರು ಮಹಿಳೆಯರು ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದರು.
`ದಾದುಮ್ಮನ ಮದುವೆ’ ಎಂದು ಕರೆಯುವ ಈ ಸಂಪ್ರದಾಯ ಗೋಕರ್ಣ ಬಳಿಯ ತಾರಿಮಕ್ಕಿಯಲ್ಲಿ ನಡೆಯಿತು. ಆಷಾಡ ಅಮಾವಾಸ್ಯೆ ಸಂಧ್ಯಾಕಾಲದಲ್ಲಿ ಈ ಮದುವೆ ನಡೆಸುವುದು ನಿಯಮ. ಅದರ ಪ್ರಕಾರ ಕೇತಕಿ ವಿನಾಯಕ ಮತ್ತು ಕರಿ ದೇವರ ಸನ್ನಿಧಿಯಲ್ಲಿ ಹರಿಯುತ್ತಿರುವ ತೊರೆಯ ಆಚೆ – ಈಚೆ ವಧು ಮತ್ತು ವರನ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸಿದರು. ಜಾನಪದ ಹಾಡುಗಳನ್ನು ಹಾಡುವ ಮೂಲಕ ವಧು – ವಧುವಿನ ಒಪ್ಪಿಗೆ ಪಡೆದು ದೇವರ ಸಾಕ್ಷಿಯಾಗಿ ಮದುವೆ ಮಾಡಿಸಿದರು.
ವಿವಾಹ ವಿಧಿಯಲ್ಲಿನ ಮಂತ್ರ-ತoತ್ರಗಳ ಸ್ಥಾನವನ್ನು ಜಾನಪದ ಹಾಡು ತುಂಬಿಕೊoಡಿತ್ತು. ನಂತರ ಹೊಸ ದಂಪತಿಯನ್ನು ಮೆರವಣಿಗೆ ಮೂಲಕ ಹುಳಸೇಕೇರಿ ಗೌಡರ ಮನೆಗೆ ಕರೆತರಲಾಯಿತು. ಅಲ್ಲಿ ಅನೇಕರು ಉಡುಗರೆ ನೀಡಿ, ದಂಪತಿಗೆ ಹಾರೈಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page