6

ಕೊರೊನಾದಿಂದ ಉದ್ಯೋಗ ಕಳೆದುಕೊಂಡ: ಖಿನ್ನತೆಗೆ ಒಳಗಾಗಿ ಕಾಣೆಯಾದ!

ಕಾರವಾರ: ಬಿಇ ಓದಿ ಬೆಂಗಳೂರಿಗೆ ಹೋಗಿದ್ದ ಉದಯ ನಾಯ್ಕ (31) ಕೊರೊನಾ ಕಾರಣದಿಂದ ಊರಿಗೆ ಮರಳಿದ್ದು, ಉದ್ಯೋಗ ಕಳೆದುಕೊಂಡ ಕಾರಣ ಮಾನಸಿಕವಾಗಿ ಕುಗ್ಗಿದ್ದ. ಖಿನ್ನತೆಗೆ ಒಳಗಾಗಿದ್ದ ಆತನಿಗೆ ಮನೆಯವರು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಿರುವಾಗ ಅಗಸ್ಟ 3ರಂದು ಆತ ಏಕಾಏಕಿ ಕಾಣೆಯಾಗಿದ್ದಾನೆ.

ಹಬ್ಬುವಾಡದ ಕೆಎಚ್‌ಬಿ ಕಾಲೋನಿಯಲ್ಲಿ ವಾಸವಾಗಿದ್ದ ಈತ ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ. ಅದಾದ ನಂತರ ಮನೆಗೆ ಬಂದವ ಮಾನಸಿಕವಾಗಿ ಕುಗ್ಗಿದ್ದ. ಉದ್ದವಾದ ಗಡ್ಡವನ್ನು ಸಹ ಬೆಳೆಸಿಕೊಂಡಿದ್ದ. ಈ ಮೊದಲು ಸಹ ಹೀಗೆ ಒಮ್ಮೆ ಹೀಗೆ ಮನೆಬಿಟ್ಟು ಗೋವಾಗೆ ಹೋಗಿದ್ದವ ನಂತರ ಮನೆಗೆ ಮರಳಿದ್ದ. ಆದರೆ, ಈ ಬಾರಿ ಎಷ್ಟು ಹುಡುಕಾಡಿದರೂ ಆತನ ಪತ್ತೆಯಾಗಿಲ್ಲ. ಮನೆಗೂ ಬಂದಿಲ್ಲ. ಬಿಳಿ ಮುಖ, ಕಪ್ಪು ಗಡ್ಡ ಹೊಂದಿದ ಈತ ಗೋದಿ ಬಣ್ಣದ ಅಂಗಿ ಹಾಗೂ ಅದೇ ಬಣ್ಣದ ಪ್ಯಾಂಟು ಧರಿಸಿದ್ದು, ಆತನನ್ನು ಹುಡುಕಿಕೊಡಿ ಎಂದು ಮನೆಯವರು ಪೊಲೀಸ್ ದೂರು ನೀಡಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page