6

ಹಣ ಮರಳಿಸಿದ ಮಧ್ಯವರ್ತಿ: ಸಂತ್ರಸ್ತ ಶಿಕ್ಷಕಿಗೆ ಸಿಕ್ಕಿತು ನ್ಯಾಯ!

ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ ರೇವತಿ ವೆಂಕ ನಾಯ್ಕ ಅವರಿಗೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಅಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿದೆ.

ಹಣ ಪಡೆದಿದ್ದ ಗೋಪಾಲಕೃಷ್ಣ ಭಟ್ಟ ಎಂಬಾತರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಈ ವೇಳೆ ಶಿಕ್ಷಕಿಗೆ ಹಣ ಮರಳಿಸುವಂತೆ ತಾಕೀತು ಮಾಡಿದರು. `ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿದಲ್ಲಿ ಹಣ ಮರಳಿಸುವೆ’ ಎಂದು ಮಧ್ಯವರ್ತಿ ಹೇಳಿಕೆ ನೀಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಣ ಹಾಗೂ ಕಾಗದ ಪತ್ರಗಳ ವಿನಿಮಯ ನಡೆಯಿತು. ಹಣ ದೊರೆತ ನಂತರ ಶಿಕ್ಷಕಿ ರೇವತಿ ಸಹ ರಾಜಿಸೂತ್ರಕ್ಕೆ ಒಪ್ಪಿಕೊಂಡರು. ಎದುರುದಾರರು ಸಹ ತಂಟೆ-ತಕರಾರು ಇಲ್ಲದೇ ಅವರಿಂದ ಪಡೆದ ಪೂರ್ತಿ ಹಣ ಪಾವತಿಸಿದರು.

ಈ ಪ್ರಕರಣದ ಬೆನ್ನಲ್ಲೆ ಕೆಲ ಮಧ್ಯವರ್ತಿಗಳ ವಿರುದ್ಧ ಇನ್ನಷ್ಟು ಭೂ ವಂಚನೆಯ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆಗಳಿವೆ. ಯಾರದೋ ಭೂಮಿಯನ್ನು ಇನ್ಯಾರಿಗೋ ತೋರಿಸಿ, ಅದರ ದಾಖಲೆಗಳನ್ನು ಒದಗಿಸದೇ ಹಣ ಪಡೆದ ಪ್ರಕರಣಗಳ ಬಗ್ಗೆಯೂ ಅಲ್ಲಲ್ಲಿ ಆರೋಪಗಳಿವೆ.

ಭೂ ವ್ಯವಹಾರದ ಹೆಸರಿನಲ್ಲಿ ಈಚೆಗೆ ಅನೇಕ ವಂಚನೆ, ಮೋಸ ನಡೆಯುತ್ತಿದ್ದು ಖರೀದಿದಾರರು ಎಚ್ಚರಿಕೆವಹಿಸುವುದು ಸೂಕ್ತ.

ಶಿಕ್ಷಕಿ ರೇವತಿ ಅವರಿಗೆ ಅನ್ಯಾಯವಾದ ಬಗ್ಗೆ `S News ಡಿಜಿಟಲ್’ ಅಗಸ್ಟ 5ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ..

ವಂಚನೆಯ ಜಾಲಕ್ಕೆ ಸುಶಿಕ್ಷಿತರೇ ಬಲಿ: ಒಡವೆ ಅಡವಿಟ್ಟು ಹಣ ನೀಡಿದ ಶಿಕ್ಷಕಿಗೆ ಇದೇಂಥ ಶಿಕ್ಷೆ?

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page