6

ಪೊಲೀಸರ ರಾತ್ರಿ ಪಹರೆ: ಸಿಕ್ಕಿದ್ದು ಎರಡು ಜನ-ಮೂರು ದನ!

ಶಿರಸಿ: ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಜಾನುವಾರುಗಳನ್ನು ರಾತ್ರಿ ಕಾರ್ಯಾಚರಣೆ ನಡೆಸಿ ಪೊಲೀಸರು ರಕ್ಷಿಸಿದ್ದಾರೆ.

ಅಗಸ್ಟ 7ರ ಬೆಳಗ್ಗೆ 1.30ರ ಅವಧಿಯಲ್ಲಿ ಅಕ್ರಮ ಜಾನುವಾರು ಸಾಗಾಟಗಾರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಾವೇರಿಯ ಶ್ರೇಯಸ್ ನಿಂಗಪ್ಪ ತಡಸ್ ಹಾಗೂ ಸುಲೇಮಾನ್ ಮಹಮದ್ ಹನೀಪ ಎಂಬಾತರು ಹಾನಗಲ್’ನ ಕೆರೆಮತ್ತಿಹಳ್ಳಿಯಿಂದ ಎತ್ತು, ಎಮ್ಮೆ ಹಾಗೂ ಕೋಣವನ್ನು ಟಾಟಾ ಇಂಟ್ರಾ ವಾಹನದಲ್ಲಿ ಸಾಗಿಸುತ್ತಿದ್ದರು. ವಾಹನದ ಒಳಗಿದ್ದ ಮೂಕಪ್ರಾಣಿಗಳಿಗೆ ಮಲಗಲು ಸಹ ಸ್ಥಳಾವಕಾಶ ಇರಲಿಲ್ಲ. ಜಾನುವಾರು ಸಾಗಾಟಕ್ಕೆ ಅಗತ್ಯವಿರುವ ಅನುಮತಿ ಪತ್ರವನ್ನು ಸಹ ಆರೋಪಿತರು ಹೊಂದಿರಲಿಲ್ಲ.

ರಾತ್ರಿ ಪಹರೆ ಕಾಯುತ್ತಿದ್ದ ಪಿಸೈ ನಾಗಪ್ಪ ಅಗಸೆಬಾಗಿಲ ಚರ್ಚಿನ ಬಳಿ ಅವರ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ವಾಹನ ಪರಿಶೀಲಿಸಿದಾಗ ಅದರೊಳಗೆ ಅಕ್ರಮ ಸಾಗಾಟದ ಜಾನುವಾರುಗಳಿದ್ದು, ಕೂಡಲೇ ಅವುಗಳಿಗೆ ಉಸಿರಾಡಲು ಅವಕಾಶ ಮಾಡಿಕೊಟ್ಟು ಜೀವ ಉಳಿಸಿದರು. ಅಕ್ರಮ ಜಾನುವಾರು ಸಾಗಾಟಗಾರರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page