6

ಬೌ ಬೌ ಸದ್ದಿಗೆ ಬೆದರಿದ ಜನ

ಕುಮಟಾ: ಪಟ್ಟಣದಲ್ಲಿ ಬೀದಿ ನಾಯಿಗಳ ಜಾತ್ರೆ ನಡೆಯುತ್ತಿದ್ದು, ಶಾಲೆಗೆ ಹೋಗುವ ಮಕ್ಕಳು ಇದರಿಂದ ಬೆದರಿದ್ದಾರೆ. ಆಕ್ರಮಣಕಾರಿ ನಾಯಿಗಳ ಕಾಟದಿಂದ ಮುಕ್ತಿ ಕೊಡಿ ಎಂದು ಅನೇಕರು ಪುರಸಭೆ ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದ್ವಿಚಕ್ರ ವಾಹನಗಳ ಅಪಘಾತಕ್ಕೆ ಅವರು ಕಾರಣವಾಗುತ್ತಿದೆ. ಈಗಾಗಲೇ ಅನೇಕರು ನಾಯಿ ಕಾಟಕ್ಕೆ ಬೈಕಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಯಾವ ಭಾಗಕ್ಕೆ ಹೋದರೂ ಅಲ್ಲಿ ಗುಂಪಿನಲ್ಲಿರುವ ಬೀದಿ ನಾಯಿಗಳು ಕಾಣಬರುತ್ತಿದೆ.
ಚಿಕ್ಕ ಮಕ್ಕಳನ್ನು ಸಹ ಅವರು ಬೆದರಿಸುತ್ತಿರುವುದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಜಾನುವಾರುಗಳ ವಿರುದ್ಧ `ಕಠಿಣ ಕ್ರಮ’ ಜರುಗಿಸುವ ಪುರಸಭೆ ಈವರೆಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಒಂದೆರಡು ಬಾರಿ ಮಾತ್ರ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದ್ದು, ನಂತರ ಅದನ್ನು ಮುಂದುವರೆಸಿಲ್ಲ. ಇದೀಗ ಎಲ್ಲಾ ಭಾಗದಲ್ಲಿಯೂ ನಾಯಿಗಳ ಜಾತ್ರೆ ಜೋರಾಗಿದೆ.

  • Related Posts

    ಬಾಳು ಬೆಳಗುಂದಿ ಕರೆಸಿ ₹1 ಕೋಟಿ ಕಾರ್ಯಕ್ರಮ

    Share this… Facebook Pinterest Twitter Linkedin Whatsappಮುಂದಿನ ವರ್ಷ ನಾಡು-ನುಡಿ ಸಂಭ್ರಮಕ್ಕೆ ₹1 ಕೋಟಿ ಖರ್ಚು! ಬಾಳು ಬೆಳಗುಂದಿ ಕರೆಸುವ ಘೋಷಣೆ ಮಾಡಿದ ಉಮೇಶ್ ಕರಿಗಾರ್ ಹಾವೇರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಾಡು-ನುಡಿ ಸಂಭ್ರಮ-2026…

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    Leave a Reply

    Your email address will not be published. Required fields are marked *

    You cannot copy content of this page