ಕುಮಟಾ: ಹುಬ್ಬಣಗೇರಿ ಹಪಿಜಾ ಚಾವಡ್ಕರ್ (46) ಎಂಬಾತರು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ಹುಟ್ಟಿನಿoದಲೂ ಮಾನಸಿಕ ಅಸ್ವಸ್ಥರಾಗಿದ್ದ ಅವರಿಗೆ ಹೊನ್ನಾವರದ ಸೆಂಟ್ ಇಗ್ನೇಶಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಗುಣಮುಖರಾಗಿರಲಿಲ್ಲ. ಹೀಗಾಗಿ ಅಲ್ಲಿಂದ ಮನೆಗೆ ಮರಳಿದ್ದರು.
ಅಗಸ್ಟ 5ರಂದು ರಾತ್ರಿ 2ಗಂಟೆಗೆ ಮನೆಯ ಕೋಣೆಯೊಳಗೆ ಹೋಗಿ ಅವರು ಬಾಗಿಲು ಹಾಕಿಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ಅಲ್ಲಿಯೇ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡರು. ಬೆಂಕಿ ಹಚ್ಚಿದ ನಂತರ ಕೂಗಾಟ ನೋಡಿದ ಮನೆಯವರು ಬಾಗಿಲು ಒಡೆದು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರು. ಬೆಂಕಿ ಆರಿಸಿ ಅರೆಬರೆ ಸುಟ್ಟಿದ್ದ ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದೊಯ್ಯುವಂತೆ ಸೂಚಿಸಿದರು. ಹೀಗಾಗಿ ಹಪಿಜಾ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಗಸ್ಟ 9ರಂದು ರಾತ್ರಿ 1.17ಕ್ಕೆ ಅಲ್ಲಿನ ವೈದ್ಯರು ಸಹ ಹಪಿಜಾ ಸಾವನಪ್ಪಿದ ಬಗ್ಗೆ ಘೋಷಿಸಿದರು.







