ಶಿರಸಿ: ಅಗಸ್ಟ 17ರ ಶನಿವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಅಂಬೇಡ್ಕರ ಭವನದಲ್ಲಿ ಕುಂಬ್ರಿ ಮರಾಠಿ ಸಮುದಾಯದವರ ಸಭೆ ನಡೆಯಲಿದೆ. `ಮೀಸಲಾತಿಗೆ ಎರಡು ದಶಕ’ ವಿಷಯ ಕುರಿತಾಗಿ ವಿಶ್ಲಷಣೆ ನಡೆಸಲು ಈ ಕಾರ್ಯಕ್ರಮ ಸಂಘಟಿಸಲಾಗಿದೆ.
ಈ ಕಾರ್ಯಕ್ರಮದ ಪೂರ್ವಬಾವಿಯಾಗಿ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಮ್ಮ ಕಚೇರಿಯಲ್ಲಿ ಅಗಸ್ಟ 10ರಂದು ಕಾರ್ಯಕಾರಿ ಸಮಿತಿ ಸಭೆ ನಡೆಸಿದರು. `ಸಾಂಘಿತ ಮತ್ತು ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕುಂಬ್ರಿ ಮರಾಠಿ ಸಮಾಜಕ್ಕೆ ಅತಿ ಹಿಂದುಳಿದ ಪಟ್ಟಿಗೆ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತ್ತು ಸಮಾಜ ಕಲ್ಯಾಣ ಸಚಿವ ಕಾಗೊಡ್ ತಿಮ್ಮಪ್ಪ ಮುತುವರ್ಜಿವಹಿಸಿದ್ದರು. ಈ ಹಿನ್ನಲೆ ಸಚಿವ ಸಂಪುಟದ ತಿರ್ಮಾನದಂತೆ ಜನವರಿ 2001ರ ಮೀಸಲಾತಿ ಪಟ್ಟಿಯಲ್ಲಿ ಈ ಸಮುದಾಯ ಸೇರ್ಪಡೆಯಾಗಿದ್ದು, ರಾಜ್ಯಪತ್ರದಲ್ಲಿ ಪ್ರಕಟಗೊಂಡಿತು’ ಎಂದು ಸಭೆಯಲ್ಲಿ ರವೀಂದ್ರ ನಾಯ್ಕ ವಿವರಿಸಿದರು.
ಪೂರ್ವಭಾವಿ ಸಭೆಯಲ್ಲಿ ಸಮಾಜದ ಹಿರಿಯ ದುರೀಣರಾದ ದೇವರಾಜ ಮರಾಠಿ ಬಂಡಲ್ , ಕಿರಣ ಮರಾಠಿ ದೇವನಳ್ಳಿ, ನಾಗರಾಜ ಮರಾಠಿ ಕೊಡಿಗದ್ದೆ, ರಮೇಶ ಮರಾಠಿ ಮೊಗದ್ದೆ, ಕೇಶವ ಮರಾಠಿ, ಶ್ರೀಕಾಂತ ಮರಾಠಿ, ಕೃಷ್ಣ ಮರಾಠಿ, ತಿಮ್ಮ ಮರಾಠಿ ಅನುಗುಣಿ, ಗಣೇಶ ಮರಾಠಿ, ಭೀಮಸೀ ವಾಲ್ಮೀಕಿ, ಬಾಬು ಮರಾಠಿ ಬಂಡಲ್ ಇತರರು ಇದ್ದರು.








