ಕುಮಟಾ: ಚಂದಾವರದಿoದ ಕುಮಟಾ ಕಡೆ ಜೆಸಿಬಿ ಓಡಿಸಿಕೊಂಡು ಬಂದ ಚಿದಾನಂದ ಕುಂಬಾರ್ ಎಂಬಾತ ಬೈಕಿನಲ್ಲಿ ಹೋಗುತ್ತಿದ್ದ ಮಂಜುನಾಥ ಹನುಮಂತ ನಾಯ್ಕ ಹಾಗೂ ಮಂಜುನಾಥ ನಾಗಪ್ಪ ನಾಯ್ಕ ಎಂಬಾತರಿಗೆ ತಾನು ಓಡಿಸುತ್ತಿದ್ದ ಹೊಸ ಯಂತ್ರವನ್ನು ಗುದ್ದಿದ್ದಾನೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ.
ಚಿದಾನಂದ ಕುಂಬಾರ್ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವ. ಗಾಯಗೊಂಡ ಇಬ್ಬರೂ ಹೊನ್ನಾವರದ ಹೊದ್ಕೆ ಶಿರೂರಿನವರು. ಇದರಲ್ಲಿ ಮಂಜುನಾಥ ಹನುಮಂತ ನಾಯ್ಕ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಮಂಜುನಾಥ ನಾಗಪ್ಪ ನಾಯ್ಕ ಮೀನು ವ್ಯಾಪಾರಿ.
10 ಅಗಸ್ಟ 24ರಂದು ಸಂಜೆ 7.40ಕ್ಕೆ ಕುಮಟಾದ ಹಾರೋಡಿ ತಿರುವಿನ ಬಳಿ ಅಪಘಾತ ನಡೆದಿದೆ. ಅಪಘಾತಕ್ಕೆ ಕಾರಣವಾದ ಜೆಸಿಬಿ ಯಂತ್ರ ಇನ್ನೂ ವಾಹನ ಸಂಖ್ಯೆ ಸಹ ಹೊಂದಿಲ್ಲ. ಅಪಘಾತದ ರಭಸಕ್ಕೆ ಮಂಜುನಾಥ ನಾಗಪ್ಪ ನಾಯ್ಕ ಅವರ ಕಾಲು ಮುರಿದಿದೆ. ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೆಸಿಬಿಯವನ್ನು ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ.








