6

Lok adalat | ಶತ್ರುನಾಶಕ್ಕೆ ರಾಜಿಯೇ ಸರಳ ಸೂತ್ರ!

ಯಲ್ಲಾಪುರ: ಚಕ್ ಅಮಾನ್ಯ, ವಿವಾಹ ವಿಚ್ಚೇದನ, ಅಪಘಾತ ಪರಿಹಾರ, ಭೂ ಸ್ವಾಧೀನ ಸೇರಿ ರಾಜಿ ಆಗಬಹುದಾದ ಪ್ರಕರಣಗಳನ್ನು ತಳಹಂತದಲ್ಲಿಯೇ ಮುಗಿಸಿಕೊಳ್ಳುವುದಕ್ಕಾಗಿ ಯಲ್ಲಾಪುರ ನ್ಯಾಯಾಲಯ ಲೋಕ್ ಅದಾಲತ್ (Lok adalat) ಮೂಲಕ ಸೆಪ್ಟಂಬರ್ 14ರಂದು ಇನ್ನೊಂದು ಅವಕಾಶ ಕಲ್ಪಿಸಿದೆ.

ಕೊಲೆ, ಸುಲಿಗೆಯಂಥ ಕ್ರಿಮಿನಲ್ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳನ್ನು ಎರಡು ಕಡೆಯವರು ಪರಸ್ಪರ ಮಾತುಕಥೆ ಮೂಲಕ ನ್ಯಾಯಾಧೀಶರ ಮುಂದೆಯೇ ಇಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಅನಗತ್ಯ ಕೋರ್ಟು – ಕಚೇರಿ ತಿರುಗಾಟದ ಸಮಯ, ವಕೀಲರ ಹಾಗೂ ನ್ಯಾಯಾಲಯದ ಶುಲ್ಕ ಉಳಿತಾಯವಾಗಲಿದೆ. ಇದಕ್ಕೆ ನ್ಯಾಯಾಧೀಶರ ಜೊತೆ ನ್ಯಾಯವಾದಿಗಳು ಸಹ ಕೈ ಜೋಡಿಸುತ್ತಿದ್ದಾರೆ.

ಹೀಗಾಗಿ `ರಾಜಿ ಆಗಬಹುದಾದ ಪ್ರಕರಣಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ ಬಿ ಹಳ್ಳಕಾಯಿ ಹೇಳಿದರು. ಲೋಕ ಅದಾಲತ್ ಪೂರ್ವಭಾವಿಯಾಗಿ ಸೋಮವಾರ ಸಂಜೆ ಪೊಲೀಸರು ಹಾಗೂ ಇನ್ನಿತರ ಅಧಿಕಾರಿಗಳ ಸಭೆ ನಡೆಸಿದ ಅವರು ಕಕ್ಷಿದಾರರ ಮನವೊಲೈಸುವಂತೆ ನ್ಯಾಯವಾದಿಗಳಿಗೆ ಸೂಚಿಸಿದರು. ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸವನಗೌಡ ಪಾಟೀಲ್ ಈ ವೇಳೆ ಹಾಜರಿದ್ದರು.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page