6

Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!

ಅಂಕೋಲಾ ತಾಲೂಕಿನ ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಓಡಿಸುತ್ತಿದ್ದ ಲಾರಿಯ ಕುರುಹು ಪತ್ತೆಯಾಗಿದೆ.

ಮಂಗಳವಾರ ಬಿಸಿಲು ಬಿದ್ದ ಹಿನ್ನಲೆ ಮುಳುಗು ತಜ್ಞ ಈಶ್ವರ ಮಲ್ಪೆ ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಲಾರಿಯ ಒಂದು ತುಂಡು ಕಾಣಿಸಿದೆ. ಭಾರತ್ ಬೇಂಜ್ ಲಾರಿಯ ವೀಲ್ ಜಾಕ್ ಇದಾಗಿರುವುದು ಖಚಿತಗೊಂಡಿದ್ದು, 28ದಿನಗಳ ಬಳಿಕ ಲಾರಿಯ ಒಂದು ಅವಶೇಷ ಮಾತ್ರ ದೊರೆತಿದೆ. `ಈ ವೀಲ್ ಜಾಕ್ ತನ್ನ ಲಾರಿಯದ್ದು’ ಎಂದು ಲಾರಿ ಮಾಲಕ ಸಹ ಖಚಿತಪಡಿಸಿದ್ದಾರೆ. ಹೀಗಾಗಿ ಅದೇ ಭಾಗದ ಅನತಿ ದೂರದಲ್ಲಿ ಲಾರಿ ಇರುವ ಬಗ್ಗೆ ಅಂದಾಜಿಸಲಾಗಿದೆ.

ಈಶ್ವರ ಮಲ್ಪೆ ತಂಡದವರು ಮಂಗಳವಾರ ಬೆಳಗ್ಗೆಯೇ ಆಗಮಿಸಿದ್ದರು. ಆದರೆ, ಶೋಧ ಕಾರ್ಯಾಚರಣೆಗೆ ಅನುಮತಿ ಸಿಕ್ಕಿರಲಿಲ್ಲ. ಶಾಸಕ ಸತೀಶ್ ಸೈಲ್ ಆಗಮಿಸಿ ಅನುಮತಿ ಕೊಡಿಸಿದ್ದು, ನಂತರ ನೀರಿಗೆ ಇಳಿದು ಹುಡುಕಾಟ ನಡೆಸಿದರು. ನಂತರ ನದಿ ಆಳದಲ್ಲಿದ್ದ ಬಾರದ ಲೋಹವನ್ನು ಅವರು ಹೊರ ತಂದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page