6

Land | ಉಳುವವನೇ ಭೂ ಒಡೆಯ: ಆದರೂ ರೈತರ ಭೂಮಿ ಮೇಲೆ ಸರ್ಕಾರದ ಹಕ್ಕು!

`ಉಳುವವನೇ ಭೂ (Land) ಒಡೆಯ ಕಾನೂನಿನ ಮೂಲಕ ಜಮೀನು ಪಡೆದ ರೈತರ ಸಮಸ್ಯೆ ಬಗೆಹರಿಸುವಂತೆ ಡಿ ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಒತ್ತಾಯಿಸಿದ್ದಾರೆ.

ಹೊನ್ನಾವರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ ದೇವರಾಜ ಅರಸು ಅವರು ಜಾರಿಗೆ ತಂದ `ಉಳುವವನೇ ಹೊಲದೊಡೆಯ’ ಎಂಬ ಭೂ ಸುಧಾರಣೆ ಕಾನೂನಿಗೆ 50 ವರ್ಷ ತುಂಬಿದೆ. ಆದರೆ, ಸಾವಿರಾರು ರೈತರ ಪಹಣಿಯಲ್ಲಿ ಇಂದಿಗೂ ಕರ್ನಾಟಕ ಸರ್ಕಾರದ ಹೆಸರಿದೆ. ಇದರಿಂದ ರೈತರಿಗೆ ಅನೇಕ ಸಮಸ್ಯೆಗಳು ಎದುರಾಗಿದ್ದು, ಹಲವು ಬಾರಿ ಹಲವು ವರ್ಷಗಳಿಂದ ಅರಸು ವಿಚಾರ ವೇದಿಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

`ಈ ಕಾನೂನು ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ 109ನೇ ಜನ್ಮ ದಿನಾಚರಣೆ ದಿನ ಕರ್ನಾಟಕ ಸರ್ಕಾರ ಮುಕ್ತ ಪಹಣಿಗಾಗಿ ಸರ್ಕಾರವನ್ನು ಆಗ್ರಹಿಸಿ ರೈತರಿಂದ ಮನವಿ ಸಲ್ಲಿಸುವ ಜನಪರ ಕಾರ್ಯಕ್ರಮ ಆಯೋಜಿಸಿದೆ’ ಎಂದು ತಿಳಿಸಿದರು.

`ಕರ್ನಾಟಕ ಸರ್ಕಾರ ಪಹಣಿ ಉಳ್ಳ ರೈತರು ಆ 20ರಂದು ಬೆಳಗ್ಗೆ 10 ಘಂಟೆಗೆ ಹೊನ್ನಾವರ ಪಟ್ಟಣದ ಸೋಶಿಯಲ್ ಕ್ಲಬ್‌ನಲ್ಲಿ ಸಭೆ ಸೇರಬೇಕಾಗಿದೆ. ರೈತರು ತಾವು ಭರ್ತಿಮಾಡಿದ ಅರ್ಜಿಗಳೊಂದಿಗೆ ಬಂದು, ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ ಸರ್ಕಾರವನ್ನು ಜಾಗೃತಗೊಳಿಸಬೇಕು’ ಎಂದು ಕರೆ ನೀಡಿದರು.

  • Related Posts

    ಬಾಳು ಬೆಳಗುಂದಿ ಕರೆಸಿ ₹1 ಕೋಟಿ ಕಾರ್ಯಕ್ರಮ

    Share this… Facebook Pinterest Twitter Linkedin Whatsappಮುಂದಿನ ವರ್ಷ ನಾಡು-ನುಡಿ ಸಂಭ್ರಮಕ್ಕೆ ₹1 ಕೋಟಿ ಖರ್ಚು! ಬಾಳು ಬೆಳಗುಂದಿ ಕರೆಸುವ ಘೋಷಣೆ ಮಾಡಿದ ಉಮೇಶ್ ಕರಿಗಾರ್ ಹಾವೇರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾವೇರಿ ನಗರದ ಮುನ್ಸಿಪಲ್ ಮೈದಾನದಲ್ಲಿ ನಾಡು-ನುಡಿ ಸಂಭ್ರಮ-2026…

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    Leave a Reply

    Your email address will not be published. Required fields are marked *

    You cannot copy content of this page