6

Student achievement | ಗೌಳಿವಾಡದಲ್ಲಿ ಹಬ್ಬದ ವಾತಾವರಣ: ಸಾಧಕ ವಿದ್ಯಾರ್ಥಿನಿಗೆ ಯುವ ಸೇನೆಯಿಂದ ಸನ್ಮಾನ

ಯಲಾಪುರ ತಾಲೂಕಿನ ಹೊಳೆನಂದಿಕಟ್ಟಾ ಗೌಳಿವಾಡದ ಜನ್ನಿ ಬಾಬು ಹುಂಬೆ 2023-24ನೇ ಸಾಲಿನ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ 94.5ರ ಸಾಧನೆ ( Student achievement ) ಮಾಡಿದ್ದು, ಸಾಧಕ ವಿದ್ಯಾರ್ಥಿನಿಯನ್ನು ಗುರುತಿಸಿದ ರಾಜ್ಯ ದನಗರಗೌಳಿ ಯುವ ಸೇನೆಯವರು ಶುಕ್ರವಾರ ಅವರ ಮನೆಗೆ ತೆರಳಿ ಗೌರವಿಸಿದರು.

`ದಟ್ಟ ಕಾಡಿನಲ್ಲಿರುವ ಹೊಳೆನಂದಿಕಟ್ಟಾ ಊರಿಗೆ ಬಸ್ ಸಂಪರ್ಕ ಸಹ ಸರಿಯಾಗಿಲ್ಲ. ನಿತ್ಯ 7ಕಿಮೀ ನಡೆದು ಕಿರವತ್ತಿ ತಲುಪುವುದು ಹಾಗೂ ಅಲ್ಲಿ ಬಸ್ಸು ಹಿಡಿದು ಯಲ್ಲಾಪುರ ಕಾಲೇಜು ತಲುಪುವುದು ಜನ್ನಿ ಬಾಬು ಹುಂಬೆ ಅವರಿಗೆ ಅನಿವಾರ್ಯವಾಗಿತ್ತು. ಮನೆಯಲ್ಲಿನ ಬಡತನ, ನಿತ್ಯ ನಡಿಗೆಯ ಆಯಾಸದ ಕಷ್ಟ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ಓದಿ ಸಾಧನೆ ಮಾಡಿರುವುದು ಇಡೀ ದನಗರ ಗೌಳಿ ಸಮುದಾಯಕ್ಕೆ ಹೆಮ್ಮೆಯ ವಿಷಯ’ ಎಂದು ರಾಜ್ಯ ದನಗರಗೌಳಿ ಯುವ ಸೇನೆ ಅಧ್ಯಕ್ಷ ಸಂತೋಷ್ ವರಕ್ ಮೆಚ್ಚುಗೆ ವ್ಯಕ್ತಪಡಿಸಿದರು.

`ಜನ್ನಿ ಬಾಬು ಹುಂಬೆ ಅವರ ಸಾಧನೆ ಇತರರಿಗೆ ಮಾದರಿ. ಅವರ ರೀತಿ ಇತರೆ ವಿದ್ಯಾರ್ಥಿಗಳು ಸಹ ಸಾಧನೆ ಮಾಡಬೇಕು. ಸಾಧನೆ ಮಾಡಿದ ಪ್ರತಿಯೊಬ್ಬರಿಗೂ ರಾಜ್ಯ ದನಗರಗೌಳಿ ಯುವ ಸೇನೆ ಅಭಿನಂದಿಸುತ್ತದೆ’ ಎಂದವರು ಹೇಳಿದರು. ಯುವ ಸೇನೆಯ ಸದಸ್ಯರಾದ ಬಮ್ಮು ಫೋಂಡೆ, ಲಕ್ಷ್ಮಣ ಕೋಕರೆ ಕರಡೊಳ್ಳಿ, ಸಮೀಧಾ ಫೌಂಡೇಷನ್ ಸದಸ್ಯ ರಾಮು ಮಲಗೊಂಡೆ, ಊರಿನವರಾದ ಧೋಂಡು ಪಟಕಾರೆ, ಧೋಂಡು ಕಾತ್ರಟ್, ರಾಮು ಎಡಗೆ, ಬಾಬು ಹುಂಬೆ ಇತರರು ಇದ್ದರು. ಬಮ್ಮು ಫೋಂಡೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page