6

Accident | ತರಕಾರಿ ತರಲು ಹೋದವ ಆಸ್ಪತ್ರೆಗೆ: ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು

ಗೋಕರ್ಣದಿಂದ ಕುಮಟಾಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಸ್ಕೂಟಿಗೆ ಗುದ್ದಿದ್ದು (Accident) ಇದರಿಂದ ಸ್ಕೂಟಿ ಓಡಿಸುತ್ತಿದ್ದ ಮೂಡಂಗಿಯ ರವಿ ಪರಮೇಶ್ವರ ನಾಯ್ಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ಮಿರ್ಜಾನ್ ಕೋಟೆಯ ಬಳಿ ಈ ಅಪಘಾತ ನಡೆದಿದೆ. ರವಿ ನಾಯ್ಕ ತರಕಾರಿ ತರುವುದಕ್ಕಾಗಿ ಪೇಟೆಗೆ ಬಂದಿದ್ದರು. ತರಕಾರಿ ಖರೀದಿಸಿ ಮನೆಗೆ ಮರಳುತ್ತಿರುವಾಗ ಅವರಿಗೆ ಬಸ್ಸು ಗುದ್ದಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಬಸ್ಸಿನ ಚಕ್ರದ ಅಡಿ ಸಿಲುಕಿಕೊಂಡಿದ್ದು, ಸ್ಥಳೀಯರು ಇದನ್ನು ಹೊರತೆಗೆದರು.

ಈ ಭಾಗದಲ್ಲಿ ಸಾಕಷ್ಟು ಅಪಘಾತ ನಡೆಯುತ್ತಿದ್ದು, ಅಪಘಾತ ತಡೆಗೆ ಮುನ್ನಚ್ಚರಿಕೆವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page