6

Illegal liquor | ಹೆಸರಿಗೆ ಎಗ್‌ರೈಸ್ ಸೆಂಟರ್: ಅಲ್ಲಿ ನಡೆಯುವ ವ್ಯಾಪಾರವೇ ಬೇರೆ!

ಶಿರಸಿ ತಾರಗೋಡಿನ ಬಸ್ ನಿಲ್ದಾಣದ ಪಕ್ಕದ ಅಂಗಡಿಯಲ್ಲಿ ಇನ್ಮುಂದೆ ಸರಾಯಿ ಸಿಗಲ್ಲ. ಇಲ್ಲಿ ಅಕ್ರಮವಾಗಿ ಸರಾಯಿ ( Illegal liquor  ) ಮಾರಾಟ ಮಾಡುತ್ತಿದ್ದ ಬಗ್ಗೆ ಅರಿತ ಪೊಲೀಸರು ದಾಳಿ ನಡೆಸಿ ಅಂಗಡಿಕಾರನಿಗೆ ಬಿಸಿ ಮುಟ್ಟಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಚೌವತ್ತಿಯ ನರಹರಿ ಸಣ್ಯಾ ನಾಯ್ಕ (38) ಎಂಬಾತ ತಾರಗೋಡು ಬಸ್ ನಿಲ್ದಾಣದ ಅಂಚಿನಲ್ಲಿ ಎಗ್‌ರೈಸ್ ಅಂಗಡಿ ನಡೆಸುತ್ತಿದ್ದ. ಇದರ ಜೊತೆ ಅಕ್ರಮವಾಗಿ ಸರಾಯಿಯನ್ನು ಆತ ದಾಸ್ತಾನು ಇರಿಸಿಕೊಂಡು ಅದನ್ನು ಮಾರಾಟ ಮಾಡುತ್ತಿದ್ದ. ಕೆಲವರು ಅಲ್ಲಿಯೇ ಆಗಮಿಸಿ ಮದ್ಯ ಸೇವಿಸುತ್ತಿದ್ದು, ಖಚಿತ ಮಾಹಿತಿ ಆಧರಿಸಿ ಅಗಸ್ಟ 17ರ ಬೆಳಗ್ಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ಸೀತಾರಾಮ ಪಿ ದಾಳಿ ನಡೆಸಿದರು.

ಆಗ ಅಲ್ಲಿ 39ರೂ ಮೌಲ್ಯದ 15 ಸರಾಯಿ ಕೊಟ್ಟೆ ಹಾಗೂ ಒಂದಷ್ಟು ಖಾಲಿ ಕೊಟ್ಟೆಗಳು ಸಿಕ್ಕಿವೆ. ಇದರೊಂದಿಗೆ ಸರಾಯಿ ಕುಡಿಯಲು ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page