6

ಹೊಂಡದಲ್ಲಿ ಹಾರಾಡಿದ ಹೋರಾಟದ ಬಾವುಟ!

ಶಿರಸಿ-ಯಲ್ಲಾಪುರ ರಸ್ತೆಯಲ್ಲಿನ ಹೊಂಡಗಳಲ್ಲಿ ಪ್ರತಿಭಟನಾಕಾರರ ಹೋರಾಟದ ಬಾವುಟಗಳು ಹಾರಾಡುತ್ತಿದೆ. ಹೊಂಡ ಮುಚ್ಚುವ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಪ್ರತಿಭಟನಾಕಾರರು ಕೆಂಪು ಬಣ್ಣದ ಬಾವುಟ ಹಾರಿಸಿದ್ದಾರೆ!

ಶಿರಸಿ-ಯಲ್ಲಾಪುರ ಮಾರ್ಗದ ಹುಳಗೋಳ ಭಾಗದಲ್ಲಿ ರಸ್ತೆಯಲ್ಲಿ ವ್ಯಾಪಕ ಪ್ರಮಾಣದ ಹೊಂಡಗಳಿವೆ. ವಾಹನ ಸವಾರರು ಒಂದು ಹೊಂಡ ತಪ್ಪಿಸಲು ಹೋಗಿ ಇನ್ನೊಂದು ಹೊಂಡದಲ್ಲಿ ಬೀಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಕೆಲವರು ಅಲ್ಲಲ್ಲಿ ಕೆಂಪು ಬಾವುಟ ಹಾರಿಸಿದ್ದಾರೆ.

`ಲೋಕೋಪಯೋಗಿ ಇಲಾಖೆಯವರಿಗೆ ಹೊಂಡದ ಬಗ್ಗೆ ಮಾಹಿತಿಯಿದ್ದರೂ ರಸ್ತೆ ರಿಪೇರಿಗೆ ಹಣವಿಲ್ಲ ಎಂಬ ಉತ್ತರ ಬರುತ್ತಿದೆ. ಗಣ್ಯರು ಹಾಗೂ ವಿವಿಧ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸಿದರೂ ಹೊಂಡ ಮುಚ್ಚುವ ಬಗ್ಗೆ ಆಸಕ್ತಿ ತೋರಿಲ್ಲ’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

  • Related Posts

    CM ಆದ ಬಳಿಕ ಮೊದಲ ಬಾರಿ ಹಾವೇರಿಗೆ ಡಿಕೆಶಿ ಎಂಟ್ರಿ!

    Share this… Facebook Pinterest Twitter Linkedin Whatsappಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಹಾವೇರಿಗೆ ಡಿಕೆ ಶಿವಕುಮಾರ್ ಭೇಟಿ: ನಾಳೆ ಕನಕದಾಸರ ಕಂಚಿನ ಮೂರ್ತಿ ಅನಾವರಣ ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಹಾವೇರಿ…

    ಸಿನಿಮಾ ಫೇಕ್ ನೋಟು ಬಳಸಿ ವಂಚನೆ, ಆರೋಪಿಗಳ ಬಂಧನ!

    Share this… Facebook Pinterest Twitter Linkedin Whatsappಸಿನಿಮಾ ಶೂಟಿಂಗ್ ನೋಟುಗಳನ್ನೇ ಖೋಟಾನೋಟುಗಳಂತೆ ಚಲಾವಣೆ! ಬ್ಯಾಂಕ್‌ನಲ್ಲಿ ₹38 ಸಾವಿರ ಜಮೆ ಮಾಡಲು ಯತ್ನ; ಇಬ್ಬರ ಬಂಧನ ಹಾವೇರಿ: ಸಿನಿಮಾ ಶೂಟಿಂಗ್‌ಗಾಗಿ ಬಳಸುವ ನೋಟುಗಳನ್ನೇ ಅಸಲಿ ನೋಟುಗಳಂತೆ ಬಳಸಿ ಬ್ಯಾಂಕ್‌ನಲ್ಲಿ ಚಲಾವಣೆ ಮಾಡಲು…

    You cannot copy content of this page