6

ಚಿರತೆ ಸಾವಿಗೆ ಬೀದಿ ನಾಯಿ ಕಾರಣ!

ಕಾರವಾರ: ಗೋಪಿಶಟ್ಟಾ ಅರಣ್ಯ ವಲಯದಲ್ಲಿದ್ದ ಚಿರತೆ ಬೀದಿ ನಾಯಿ ಭಕ್ಷಿಸುವ ಆಸೆಯಿಂದ ಊರಿಗೆ ಪ್ರವೇಶಿಸಿದ್ದು, ಅಲ್ಲಿನ ಬಾವಿಗೆ ಬಿದ್ದು ಸಾವನಪ್ಪಿದೆ.

ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದಕ್ಕೆ ಚಿರತೆ ಗುರಿ ಹಾಕಿ ಆ ನಾಯಿಯನ್ನು ಅಟ್ಟಿಸಿಕೊಂಡು ಬಂದಿದೆ. ಹೀಗೆ ಬರುವಾಗ ನಾಯಿ ತಪ್ಪಿಸಿಕೊಂಡಿದ್ದು, ಚಿರತೆ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದೆ. ಬಾವಿಯ ನೀರು ತರಲು ಹೋದ ಮನೆಯವರಿಗೆ ಚಿರತೆಯ ಶವ ಕಾಣಿಸಿದ್ದು, ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.

ಜರಡಿ ಗ್ರಾಮದ ರಮೇಶ ಗೋವೇಕರ್ ಅವರ ತೆರೆದ ಬಾವಿಯಲ್ಲಿದ್ದ ಚಿರತೆಯ ಶವವನ್ನು ಅರಣ್ಯಾಧಿಕಾರಿಗಳು ಮೇಲೆತ್ತಿದರು. ನೆಲಕ್ಕೆ ಸಮಾನಾಂತರವಾಗಿ ಬಾವಿ ಇದ್ದ ಕಾರಣ ಅದರಲ್ಲಿ ಚಿರತೆ ಎಡವಿ ಬಿದ್ದಿದೆ. ಪಶು ವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page