6

ಗಣೇಶ ಉತ್ಸವ: ಸರ್ಕಾರಿ ನೌಕರರಲ್ಲಿಯೇ ಎರಡು ಬಣ!

ಚದುರಿ ಹೋಗಿದ್ದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಒಗ್ಗೂಡಿಸಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶ ಉತ್ಸವವನ್ನು ಹುಟ್ಟುಹಾಕಿದರು. ಆದರೆ, ಗಣಪತಿ ಪ್ರತಿಷ್ಠಾಪನೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡ ಅಂಕೋಲಾದ ಸಾರಿಗೆ ನೌಕರರು ಇದೀಗ ಎರಡು ಬಣವಾಗಿದ್ದು, ಎರಡು ಕಡೆ ಪ್ರತ್ಯೇಕ ಗಣೇಶ ಉತ್ಸವ ಆಚರಣೆಯ ಸಿದ್ಧತೆ ನಡೆಸಿದ್ದಾರೆ.

ಮೊದಲು ಕೆಎಸ್‌ಆರ್‌ಟಿಸಿಯವರು ಬಸ್ ಘಟಕವಿರುವ ವಂದಿಗೆಯಲ್ಲಿ ಗಣೇಶ ಉತ್ಸವ ಆಚರಿಸುತ್ತಿದ್ದರು. ಹೊಸ ಬಸ್ ನಿಲ್ದಾಣ ನಿರ್ಮಾಣವಾದ ನಂತರ ಅಲ್ಲಿ ಗಣಪನ ವಿಗ್ರಹವನ್ನಿರಿಸಿದರು. ಆದರೆ, ಕಳೆದ ವರ್ಷ ಸಿಬ್ಬಂದಿ ನಡುವೆ ಎರಡು ಗುಂಪುಗಳಾಗಿದ್ದು, ಕೆಲವರು ವಂದಿಗೆಯಲ್ಲಿನ ಬಸ್ ಘಟಕದಲ್ಲಿ ಗಣೇಶನನ್ನು ಸ್ಥಾಪಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರಸ್ತುತ ಈ ವರ್ಷ ಸಹ ಇದೇ ತಿಕ್ಕಾಟ ಮುಂದುವರೆದಿದೆ. ಅಂಕೋಲಾ ಕೆಎಸ್‌ಆರ್‌ಟಿಸಿ ಘಟಕದಿಂದ ಈ ಬಾರಿ ಎರಡೆರಡು ಕಡೆ ಗಣೇಶ ಉತ್ಸವ ನಡೆಯಲಿದ್ದು, ಎರಡು ಕಡೆ ಪೈಪೋಟಿ ಜೋರಾಗಿದೆ.

ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್‌ವರೆಗೂ ಹೋಗಿದ್ದು, ಶಾಸಕ-ಸಚಿವರಿಂದಲೂ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಬಸ್ ಘಟಕ ಹಾಗೂ `ಬಸ್ ನಿಲ್ದಾಣ ಎರಡೂ ಕಡೆ ಗಣೇಶ ಉತ್ಸವ ನಡೆಸಿ’ ಎಂದು ಸತೀಶ್ ಸೈಲ್ ಸೂಚಿಸಿದರು. ಅದರ ಪ್ರಕಾರ ಒಂದು ಬಣದವರು ಬಸ್ ಘಟಕದಲ್ಲಿ ಹಾಗೂ ಇನ್ನೊಂದು ಬಣದವರು ಬಸ್ ನಿಲ್ದಾಣದಲ್ಲಿ ಗಣೇಶ ಉತ್ಸವ ಆಚರಿಸುವ ನಿರ್ಣಯ ಮಾಡಿದ್ದಾರೆ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page