6

ನಾನು ನಂದಿನಿ…. ತಪ್ಪು ಮಾಡಿ ಸಿಕ್ಕಿ ಬಿದ್ದೀನಿ!

ಕುಮಟಾ: ಹೊಸ ಬಸ್ ನಿಲ್ದಾಣದ ಬಳಿಯಿರುವ ಮಹಾಸತಿ ಸರ್ಕಲ್‌ನಲ್ಲಿರುವ `ನಂದಿನಿ’ ಹಾಲಿನ ಮಳಿಗೆಯಲ್ಲಿ ಅವಧಿ ಮುಗಿದ ಹಾಲು ಹಾಗೂ ಬಿಸ್ಕತ್ ಮಾರಾಟ ಮಾಡುತ್ತಿರುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದರು.

ಯಶ್ವಂತ ಶಾನಭಾಗ ಎಂಬಾತರು ಈ ಮಳಿಗೆ ನಡೆಸುತ್ತಿದ್ದು ಮಳಿಗೆಯಲ್ಲಿದ್ದವರಿಗೆ ಗ್ರಾಹಕ ಸುರಕ್ಷತೆಯ ಬಗ್ಗೆ ಪಾಠ ಮಾಡಿ ಎಚ್ಚರಿಕೆ ನೀಡಿದರು. ನಂತರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿ ರಾಜಶೇಖರ ಹಾಗೂ ಆಹಾರ ಸುಕರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್ಟ ದಾಳಿ ನಡೆಸಿದಾಗ ಮಳಿಗೆಯ ಪ್ರಿಡ್ಜಿನಲ್ಲಿ ಅಗಸ್ಟ 1 ಮತ್ತು 2ನೇ ತಾರಿಕು ನಮೂದಿಸಿದ ಹಾಲಿನ ಪ್ಯಾಕೆಟ್ ಕಾಣಿಸಿದವು.

ನಂದಿನಿ ಬ್ಯಾಂಡಿನ ಕೌವ್ ಮಿಲ್ಕ್ ಎಂಟು ಪ್ಯಾಕ್, ಟೋನ್ಡ್ ಮಿಲ್ಕ್ 68 ಪ್ಯಾಕ್, ಶುಭಂ ಮಿಲ್ಕ್ 35 ಲೀಟರ್’ನ್ನು ಅವರು ವಶಕ್ಕೆ ಪಡೆದರು. ಯಾವುದೇ ಉತ್ಪನ್ನಕ್ಕೆ ಗರಿಷ್ಟ ಮಾರಾಟ ದರಕ್ಕಿಂತ (MRP) ಅಧಿಕ ಮೊತ್ತವನ್ನು ಪಡೆಯದಂತೆ ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page