6

ಅಮ್ಮಾ.. ನಾನು ಮಾಡಿದ ತಪ್ಪೇನು? ನನ್ನೇಕೆ ಬಿಟ್ಟು ಹೋದೆ? ಪುಠಾಣಿ ಸಾಕ್ಷಿ ಪ್ರಶ್ನೆಗೆ ಇಲ್ಲ ಉತ್ತರ!

ಕಾರವಾರ: ಬಾಂಡಿಶೆಟ್ಟಾದ ಸಂಜನಾ ಗಜಾನನ ತಳೇಕರ್ (39) ಎಂಬಾತರು ತನ್ನ ಮಗಳನ್ನು ಶಾಲೆಗೆ ಕಳುಹಿಸಿ ನಂತರ ಕಾಡಿಗೆ ತೆರಳಿ ಬೆಂಕಿ ಹಚ್ಚಿಕೊಂಡು ಸಾವನಪ್ಪಿದ್ದಾರೆ.

ಕಿನ್ನರದ ಅಂಬೇಜೂಗದ ಸಂಜನಾ ಅವರು ಬಾಂಡಿಶೆಟ್ಟಾದಲ್ಲಿ ಪತಿ ಗಜಾನನ ಹಾಗೂ ಮಗಳು ಸಾಕ್ಷಿ ಜೊತೆ ವಾಸಿಸುತ್ತಿದ್ದರು. ಅನಾರೋಗ್ಯದ ಹಿನ್ನಲೆ ಗೋವಾ ಹಾಗೂ ಕಾರವಾರದಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಆದರೆ, ಆರೋಗ್ಯದಲ್ಲಿ ಸುದಾರಣೆ ಕಂಡಿರಲಿಲ್ಲ. ಸೆ 4ರಂದು ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದ ಸಂಜನಾ ಸೀಮೆಎಣ್ಣೆ ಜೊತೆ ಹೊರ ಬಿದ್ದಿದ್ದು, ಪಕ್ಕದಮನೆ ಮಂಗಲಾ ಇದನ್ನು ಪ್ರಶ್ನಿಸಿದ್ದರು. ಆಗ ಸಂಜನಾ ಸಂಬoಧಿಕರ ಮನೆಗೆ ಸೀಮೆಎಣ್ಣೆ ಕ್ಯಾನ್ ಕೊಟ್ಟುಬರುವುದಾಗಿ ಸುಳ್ಳು ಹೇಳಿದ್ದರು.

ನಂತರ ಶಿರವಾಡ ದೇವತೆವಾಡಗೆ ತೆರಳಿದ ಸಂಜನಾ ಅಲ್ಲಿನ ಗಿಡ-ಗಂಟಿಗಳ ನಡುವೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ನಂತರ ಬೆಂಕಿ ಹಚ್ಚಿಕೊಂಡು ಸಾವನಪ್ಪಿದ್ದಾರೆ. ದೇಹ ಸುಟ್ಟು ಕರಕಲಾಗಿದ್ದನ್ನು ನೋಡಿದ ಸ್ಥಳೀಯರಾದ ಮನೋಜ ಮಹಾದೇವ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಗೆ ಬಂದ ಹೊಸಾಳಿ ತರ‍್ಲೆಭಾಗದ ನೀಲೇಶ ನಾಗೇಶ ಪಡವಳಕರ್ `ಸಾವನಪ್ಪಿರುವುದು ತನ್ನ ತಂಗಿ ಸಂಜನಾ’ ಎಂದು ಖಚಿತಪಡಿಸಿದ್ದಾರೆ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    You cannot copy content of this page