6

ಚಿನ್ನ ಕದ್ದ ಹೋಂ ಗಾರ್ಡಗೆ ಜೈಲಿನಲ್ಲಿ ಹಬ್ಬದೂಟ!

ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಹಿಡಿದಿದ್ದಾರೆ.

ಅಗಸ್ಟ 30ರಂದು ರಾತ್ರಿ 8. 45ಕ್ಕೆ ರೇಷ್ಮಾ ಮನೆಯಿಂದ ಹೊರಗಿದ್ದರು. ಆಗ ಅವರ ಮನೆಯೊಳಗೆ ನುಗ್ಗಿದ ಶ್ರೀಧರ್ ಕಪಾಟು ತೆಗೆದು ಅಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ ಚಿನ್ನದ ಬಳೆ ಜೊತೆ 2 ಸಾವಿರ ರೂ ನಗದು ಹಣ ದೋಚಿದ್ದ. ರೇಷ್ಮಾ ಒಳಗೆ ಬಂದಿರುವುದನ್ನು ನೋಡಿ ಆತ ಅಲ್ಲಿಂದ ಓಡಿ ಪರಾರಿಯಾಗಿದ್ದು, ಕಳ್ಳತನ ನಡೆಸಿರುವುದು ಆತನೇ ಎಂದು ಖಚಿತಪಡಿಸಿಕೊಂಡ ನಂತರ ಅವರು ಪೊಲೀಸ್ ದೂರು ನೀಡಿದ್ದರು.

ಆರೋಪಿ ಶ್ರೀಧರ ಕೃಷ್ಣಾ ಕಾಣಕೋಣಕರ ಸಹ ಅದೇ ಊರಿನವನಾಗಿದ್ದು, ಹೋಂ ಗಾರ್ಡ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಪೊಲೀಸರು ಆತನನ್ನು ಹಿಡಿದು ಆತನ ಬಳಿಯಿದ್ದ 1.95 ಲಕ್ಷ ರೂ ಮಲ್ಯದ ಬಂಗಾರವನ್ನು ವಶಕ್ಕೆ ಪಡೆದಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page