6

33ನೇ ವಯಸ್ಸಿಗೆ ಸಾವನಪ್ಪಿದ ರೈಲ್ವೆ ಸಿಬ್ಬಂದಿ

ಜೊಯಿಡಾ: ರೈಲ್ವೆ ಹಳಿಗಳ ನಿರ್ವಹಣೆ ನೋಡಿಕೊಳ್ಳುವುದಕ್ಕಾಗಿ ಬಿಹಾರದಿಂದ ಜೊಯಿಡಾಗೆ ಬಂದಿದ್ದ ಸತ್ಯೇಂದ್ರಕುಮಾರ (33) ವಿಪರೀತ ಸರಾಯಿ ಕುಡಿದು ಸಾವನಪ್ಪಿದ್ದಾರೆ.

ಕ್ಯಾಸಲ್‌ರಾಕ್‌ನಲ್ಲಿರುವ ಹಳೆಯ ರೈಲ್ವೆ ವಸತಿ ನಿಲಯದಲ್ಲಿ ಸತ್ಯೇಂದ್ರಕುಮಾರ ಒಬ್ಬರೇ ವಾಸವಾಗಿದ್ದರು. ಸೆ 2ರಂದು ಸರಾಯಿ ಕುಡಿದು ಅಸ್ವಸ್ಥಗೊಂಡಿದ್ದರು. ರೈಲು ಹಳಿ ಬಳಿ ಬಿದ್ದ ಅವರಿಗೆ ಇತರೆ ಸಿಬ್ಬಂದಿ ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ಸಾವಿರಾರು ಜನರ ಜೀವ ಕಾಪಾಡಿದ ರೈಲು ಸಿಬ್ಬಂದಿ

ಮರುದಿನ ಬೆಳಗ್ಗೆ ಅವರು ಅಲ್ಲಲ್ಲಿ ಓಡಾಡಿಕೊಂಡಿದ್ದರು. ಸಂಜೆ ಪತ್ನಿ ಪತ್ನಿ ಪ್ರಿಯಾಂಕಕುಮಾರಿ ಫೋನ್ ಮಾಡಿದಾಗ ಸ್ವೀಕರಿಸಿಲ್ಲ. ಆಗ ಪ್ರಿಯಾಂಕಕುಮಾರಿ ರೈಲ್ವೆ ನೌಕರ ಭಾಗಿರಥ ಪಂಡೀತ ಅವರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಸಂಜೆ 5 ಗಂಟೆಗೆ ರೈಲ್ವೆ ವಸತಿ ನಿಲಯಕ್ಕೆ ಭಾಗಿರಥ ಪಂಡೀತ ಹೋಗಿ ನೋಡಿದಾಗ ಸತ್ಯೇಂದ್ರಕುಮಾರ ಸಾವನಪ್ಪಿರುವುದು ಗೊತ್ತಾಗಿದೆ.

 

 

 

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page