6

ಬೈಕಿನವನನ್ನು ಎಳೆದೊಯ್ದ ರಿಕ್ಷಾ: ಪ್ರತ್ಯಕ್ಷದರ್ಶಿಯಿಂದ ಪೊಲೀಸ್ ದೂರು!

ಶಿರಸಿ: ಕೋಟೆಕರೆ ಜನಾರ್ಧನ ಗ್ಯಾರೇಜ್ ಎದುರು ಬೈಕ್ ಹಾಗೂ ಟಾಟಾಏಸ್ ರಿಕ್ಷಾ ನಡುವೆ ಅಪಘಾತವಾಗಿದ್ದು, ಬೈಕ್ ಸವಾರ ಉದಯ ಬಂಗಾರಿ ಗುಡ್ಡದಮನೆ ಗಾಯಗೊಂಡಿದ್ದಾರೆ.

ಸೆಪ್ಟೆoಬರ್ 4ರ ರಾತ್ರಿ 11 ಗಂಟೆಗೆ ಹುಬ್ಬಳ್ಳಿ ಅಯ್ಯಪ್ಪ ನಗರದ ಬಸವರಾಜ ತಳವಾರ್ ಎಂಬಾತರು ಈ ಅಪಘಾತ ನೋಡಿದ್ದು, ಟಾಟಾಏಸ್ ಚಾಲಕ ಹುಸೇನ್ ಸಾಬ್ ವಿರುದ್ಧ ಇದೀಗ ಅವರೇ ಪೊಲೀಸ್ ದೂರು ನೀಡಿದ್ದಾರೆ. ಬಸವರಾಜ ತಳವಾರ್ ಅವರು ಆ ದಿನ ಸ್ನೇಹಿತನನ್ನು ಭೇಟಿ ಆಗಲು ಕೋಟೆಕೆರೆ ಸರ್ಕಲ್ ಬಳಿ ನಿಂತಿದ್ದರು. ಆಗ ಕೆಳಗಿನ ಗುಡ್ಡದಮನೆಯ ಉದಯ ಎಂಬಾತರು ಬೈಕಿನಲ್ಲಿ ಎಪಿಎಂಸಿ ಕಡೆ ಹೋಗುತ್ತಿದ್ದರು.

ಆಗ ಜನಾರ್ಧನ ಗ್ಯಾರೇಜ್ ಎದುರು ನಿಂತುಕೊoಡಿದ್ದ ಟಾಟಾಏಸ್ ಓಡಿಸಿಕೊಂಡು ಬಂದ ಕರಿಗುಂಡಿ ರಸ್ತೆಯ ಹುಸೇನ್ ಸಾಬ್ ಉದಯ ಅವರ ಬೈಕಿಗೆ ಗುದ್ದಿ ಬೈಕ್‌ಸಹಿತ ಅವರನ್ನು ಎಳೆದುಕೊಂಡು ಹೋಗಿದ್ದು, ಇದರಿಂದ ಉದಯ ಅವರ ಎದೆ ಹಾಗೂ ಕೈ-ಕಾಲುಗಳಿಗೆ ಗಾಯವಾಗಿದೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಬಸವರಾಜ ತಳವಾರ್ ಅವರಿಗೆ ಈ ಅಪಘಾತದ ಬಗ್ಗೆ ಈವರೆಗೂ ಪೊಲೀಸ್ ದೂರು ದಾಖಲಾಗಿರುವುದು ಗೊತ್ತಾಗಿದೆ. ತಕ್ಷಣ ಉದಯ ಅವರ ಮನೆಯವರ ಜೊತೆ ಮಾತನಾಡಿ ಅವರು ಪೊಲೀಸ್ ದೂರು ನೀಡಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page