6

ಫೇಸ್ಬುಕ್ | ಫೇಕ್ ಅಕೊಂಟ್ ವಿರುದ್ಧ ಪೊಲೀಸ್ ಕ್ರಮ!

ಶಿರಸಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ವಿಡಿಯೋಗೆ ಅಸಬಂದ್ಧ ಬರಹ ಬರೆದಿದ್ದ ಫೇಸ್ಬುಕ್ ಖಾತೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕಮೆಂಟ್ ಪೋಸ್ಟ್ ಮಾಡಿದ ಖಾತೆ ನಕಲಿ ಎಂಬoತಿದ್ದು, , ಪ್ರಕರಣ ದಾಖಲಾದ ನಂತರವೂ ಬರಹ ಡಿಲಿಟ್ ಆಗಿಲ್ಲ.

ರಾಮನಬೈಲಿನ ನಾಗೇಶ್ವರ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹ ವಿಸರ್ಜನೆ ನಡೆಯುತ್ತಿತ್ತು. ರಾಮನಬೈಲ್ ದೊಡ್ಡ ಮಸೀದಿ ಮುಂದೆ ಈ ಮೆರವಣಿಗೆ ಹೊರಟಾಗ ಅಲ್ಲಿನ ಫಾರುಕ್ ಶೇಖ್ ನೇತ್ರತ್ವದಲ್ಲಿ ಮುಸ್ಲಿಂ ಸಮುದಾಯದವರು ನೀರು ಹಾಗೂ ಸಿಹಿ ಹಂಚುತ್ತಿದ್ದರು. ಈ ವಿಡಿಯೋ `ಶಿರಸಿ ಕನ್ನಡಿಗ’ ಎಂಬ ಫೇಸ್ಬುಕ್ ಪುಟದಲ್ಲಿ ಪ್ರಕಟವಾಗಿದೆ. ಇದಕ್ಕೆ ಅನೇಕರು ಉತ್ತಮ ರೀತಿಯಲ್ಲಿ ಕಮೆಂಟ್ ಮಾಡಿದ್ದು, ನಂದಿಶ ನಂದಿತಾ ಎಂಬ ಹೆಸರಿನ ಖಾತೆಯಿಂದ ಕೋಮು ಸೌಹಾರ್ದತೆ ಕದಡುವ ರೀತಿ ಬರಹ ಪ್ರಕಟವಾಗಿದೆ.

ಎರಡು ಗುಂಪುಗಳ ನಡುವೆ ಘರ್ಷಣೆಗೆ ಪ್ರಚೋದಿಸುವುದಕ್ಕಾಗಿ ಈ ಕಮೆಂಟ್ ಮಾಡಿದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಅರುಣ ಮಾನಪ್ಪ ಲಮಾಣಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಾಗಿದೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page