6

ಕಾರಿಗೆ ಗುದ್ದಿದ ಬಸ್ಸು: ಆಸ್ಪತ್ರೆಗೆ ಹೋಗುತ್ತಿದ್ದವ ಸ್ಮಶಾನಪಾಲು

ಶಿರಸಿ: ಕಾರು ಹಾಗೂ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಚಂದ್ರಶೇಖರ ಬೆಲ್ಲೇದ (55) ಎಂಬಾತರು ಸಾವನಪ್ಪಿದ್ದಾರೆ.

ಸಿದ್ದಾಪುರದ ಕೊಂಡ್ಲಿ ಗ್ರಾಮದವರಾದ ಚಂದ್ರಶೇಖರ್ ಅವರು ತಮ್ಮ ಪತ್ನಿ ಜೊತೆ ವ್ಯಾಗನರ್ ಕಾರಿನಲ್ಲಿ ಬರುತ್ತಿದ್ದರು. ಅವರು ಶಿರಸಿಯ ಆಸ್ಪತ್ರೆಗೆ ತೆರಳುವುದಕ್ಕಾಗಿ ಮನೆಯಿಂದ ಹೊರಟಿದ್ದರು. ಆದರೆ, ಕಾನಗೋಡಿನ ಬಳಿ ಅವರ ಕಾರಿಗೆ ಬಸ್ಸು ಗುದ್ದಿದೆ. ಈ ಬಸ್ಸು ಶಿರಸಿಯಿಂದ ಸಾಗರ ಮಾರ್ಗವಾಗಿ ತೆರಳುತ್ತಿತ್ತು. ಬಸ್ಸು ಗುದ್ದಿದ ರಭಸಕ್ಕೆ ಕಾರಿನ ಒಳಗೆ ಚಂದ್ರಶೇಖರ್ ಅವರು ಕೊನೆ ಉಸಿರೆಳೆದರು. ಅಪಘಾತವಾದ ಬಸ್ಸಿನಲ್ಲಿ 48 ಪ್ರಯಾಣಿಕರಿದ್ದರು. ಅಪಘಾತದ ರಭಸಕ್ಕೆ ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತದ ಭೀಕರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಸಾಕ್ಷಿಯಾಗಿದ್ದು, ತಕ್ಷಣ ಕೆಲ ಪ್ರಯಾಣಿಕರು ಆಂಬುಲೆನ್ಸಿಗೆ ಕರೆ ಮಾಡಿ ಮಾಹಿತಿ ನೀಡಿದರು. ಈ ಅಪಘಾತದಲ್ಲಿ ಚಂದ್ರಶೇಖರ ಅವರ ಪತ್ನಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page