6

ಟಿ ಎಂ ಎಸ್ ಸಭೆ | ಅಧ್ಯಕ್ಷ-ಉಪಾಧ್ಯಕ್ಷರಿಗೆ ಬಂಪರ್ ಲಾಟರಿ!

ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಿಗೆ ಇನ್ಮುಂದೆ ಪ್ರತಿ ತಿಂಗಳು 7500ರೂ ಹಾಗೂ ಉಪಾಧ್ಯಕ್ಷರಿಗೆ 5 ಸಾವಿರ ರೂ ಗೌರವಧನ ಸಿಗಲಿದೆ.

ಈ ಹಿಂದೆ ಅಧ್ಯಕ್ಷರಿಗೆ ಮಾತ್ರ ಮಾಸಿಕ 5 ಸಾವಿರ ರೂ ಗೌರವಧನ ನೀಡಲಾಗುತ್ತಿತ್ತು. ಕಳೆದ ವರ್ಷ ಹೊಸದಾಗಿ ಉಪಾಧ್ಯಕ್ಷ ಹುದ್ದೆ ಸೃಷ್ಠಿಸಲಾಗಿದ್ದು, ಉಪಾಧ್ಯಕ್ಷರಿಗೂ ಗೌರವಧನ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಇದರೊಂದಿಗೆ ಅಧ್ಯಕ್ಷರಿಗೆ ನೀಡುವ ಗೌರವಧನ ಹೆಚ್ಚಳ ಮಾಡುವ ಬಗ್ಗೆ ನಿರ್ಣಯಿಸಲಾಗಿದ್ದು, ಗುರುವಾರ ನಡೆದ ವಾರ್ಷಿಕ ಸಭೆಯಲ್ಲಿ ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಕಳೆದ ವರ್ಷ ಟಿ ಎಂ ಎಸ್ ಅಧ್ಯಕ್ಷರ ಗೌರವಧನಕ್ಕಾಗಿ 60 ಸಾವಿರ ರೂ, ನಿರ್ದೇಶಕರ ಸಭಾಭತ್ಯೆ ಹಾಗೂ ಪ್ರವಾಸ ಭತ್ಯೆಗಾಗಿ 2.63 ಲಕ್ಷ ರೂ ವೆಚ್ಚ ಮಾಡಿದೆ. ಇದರೊಂದಿಗೆ ಸಭೆಗೆ ಹಾಜರಾಗುವ ನಿರ್ದೇಶಕರಿಗೆ ಈ ಹಿಂದೆ ಸಭಾಭತ್ಯೆ ಎಂದು 500ರೂ ನೀಡುತ್ತಿದ್ದು, ಅದನ್ನು 1000ರೂಪಾಯಿಗೆ ಏರಿಸಲಾಗಿದೆ. ಈ ಸಂಸ್ಥೆಗೆ ಶಾಸಕ ಶಿವರಾಮ ಹೆಬ್ಬಾರ್ ಸೇರಿ 14 ಜನ ನಿರ್ದೇಶಕರಿದ್ದಾರೆ. ಪ್ರಸ್ತುತ ಟಿಎಂಎಸ್ ಅಧ್ಯಕ್ಷರಾಗಿ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಸೇವೆಯಲ್ಲಿದ್ದಾರೆ.

ಕಿರಾಣಿ, ಕೃಷಿ, ಅಡಿಕೆ ವ್ಯವಹಾರ ಹಾಗೂ ಇಂಧನ ಪೂರೈಕೆ ಸೇರಿ ಹಲವು ಸೇವೆ ನೀಡುತ್ತಿರುವ ಟಿಎಂಎಸ್ ಕಳೆದ ವರ್ಷ 1.72 ಕೋಟಿ ರೂ ಲಾಭಗಳಿಸಿದೆ. ಈ ಹಿನ್ನಲೆ ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ವ್ಯವಹಾರ ಮಾಡಿದ ಸಹಕಾರಿ ಸಂಘಗಳಿಗೂ ಪ್ರೋತ್ಸಾಹ ಧನ ಸಿಗಲಿದೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page