6

ನಡುರಾತ್ರಿವರೆಗೂ ಇಸ್ಪಿಟ್ ಆಟ: 11 ಎಲೆಮಾನವರ ಮೇಲೆ ಪೊಲೀಸರ ಬಾಣ!

ಸಿದ್ದಾಪುರ: ತಾರಿಘಟಕಿಯ ವೆಂಕಟ್ರಮಣ ಪ್ರಭಾಕರ ಹೆಗಡೆ ಅವರ ಮನೆ ಮುಂದೆ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 75 ವರ್ಷದ ವೃದ್ಧನನ್ನು ಸೇರಿ ಒಟ್ಟು 11 ಜನ ಸಿಕ್ಕಿಬಿದ್ದಿದ್ದಾರೆ.

ಇಸ್ಪಿಟ್ ಆಟಕ್ಕೆ ಅವಕಾಶ ನೀಡಿದ ಸರ್ಕೋಳ್ಳಿ ತಾರಿಘಟಗಿಯ ಪ್ರಭಾಕರ ವೆಂಕಟ್ರಮಣ ಹೆಗಡೆ ಮೊದಲ ಆರೋಪಿ. ಶಿರಸಿ ಕುಳವೆ ಕಂಚಗದ್ದೆಯ ರವೀಂದ್ರ ಮಂಜುನಾಥ ಹೆಗಡೆ, ಅದೇ ಊರಿನ ಸದಾನಂದ ಗಣಪತಿ ಹೆಗಡೆ, ಪ್ರವೀಣ ನರಸಿಂಹ ಭಟ್ಟ, ಶಿರಸಿ ಫಾರೆಸ್ಟ ಕಾಲೋನಿಯ ಶ್ರೀಧರ ಶಂಕರ ಭಟ್ಟ, ಬಾಳೆತೋಟದ ಕೇಶವ ನಾರಾಯಣ ಹೆಗಡೆ
ಸಿದ್ದಾಪುರ ಸರ್ಕೋಳ್ಳಿ ಕಾರೆಗದ್ದೆಯ ಗಜಾನನ ಹೆಗಡೆ, ಅದೇ ಊರಿನ ಸುರೇಶ ನಾಗೇಶ ಭಟ್ಟ, ಮಂಜುನಾಥ ಗಣಪತಿ ಹೆಗಡೆ, ಸಿದ್ದಾಪುರ ತಟ್ಟಿಕೈ ದೇವರು ಸುಬ್ರಾಯ ಹೆಗಡೆ ಹಾಗೂ ಜಯಂತ ಗಣಪತಿ ಹೆಗಡೆ ಇನ್ನಿತರ ಆರೋಪಿತರು.

ಸೆ 18ರ ರಾತ್ರಿ ಅವರೆಲ್ಲರೂ ಹಣ ಕಟ್ಟಿ ಅಂದರ್ ಬಾಹರ್ ಆಡುತ್ತಿದ್ದರು. ಜೂಜಾಟಕ್ಕೆ ಬಳಸಿದ್ದ ಇಸ್ಪಿಟ್ ಎಲೆ, ಹಾಸಿಕೊಂಡಿದ್ದ ಕಂಬಳಿ, ಅರ್ದ ಉರಿದ ಮೇಣದಬತ್ತಿ ಜೊತೆ ಅಲ್ಲಿ ಸಿಕ್ಕ 61390ರೂ ಹಣವನ್ನು ಪಿಎಸ್‌ಐ ಗೀತಾ ಶಿರ್ಶಿಕರ್ ವಶಕ್ಕೆ ಪಡೆದಿದ್ದಾರೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    You cannot copy content of this page