6

ಸಿಮೆಂಟ್ ಪಾಕ್ಟರಿ ಒಳಗೆ ಮಾರಾಮಾರಿ!

ಮುಂಡಗೋಡು: ತೆಗ್ಗಿನಕೊಪ್ಪ ಮೂಲದ ಸಹಾಯಕ ಇಂಜಿನಿಯರ್ ರವಿ ರಾಠೋಡ್ ಅವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ.

ಸೆ 22ರಂದು ರವಿ ರಾಠೋಡ್ ಅವರು ತಮ್ಮ ತಂದೆ ಆದು ರಾಥೋಡ್, ಅಣ್ಣ ಸುನೀಲ ರಾಠೋಡ್, ಅತ್ತಿಗೆ ಗೀತಾ ರಾಠೋಡ್ ಅವರ ಜೊತೆ ಮಾತನಾಡುತ್ತಿದ್ದರು. ತೆಗ್ಗಿನಕೊಪ್ಪದಲ್ಲಿರುವ ತಮ್ಮ ಒಡೆತನದ ಸಿಮೆಂಟ್ ಬ್ಲಾಕ್ ಪಾಕ್ಟರಿ ಬಳಿ ಆ ಪ್ರದೇಶಕ್ಕೆ ನುಗ್ಗಿದ ಮನೋಹರ ಲಮಾಣಿ ಎಂಬಾತ ಏಕಾಏಕಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮನೋಹರ ಲಮಾಣಿ ಜೊತೆ ವಿನೋದ ಎಂಬ ಇನ್ನೊಬ್ಬ ಹಾಗೂ ಮತ್ತಿಬ್ಬರು ಅಪರಿಚಿತರು ಇದ್ದರು.

ಈ ನಾಲ್ವರು ಸೇರಿ ರವಿ ಅವರಿಗೆ ಕೆನ್ನೆಗೆ ಹೊಡೆದು ಕಾಲಿನಿಂದ ತುಳಿದಿದ್ದು, ಹೊಡೆದಾಟ ತಪ್ಪಿಸಲು ಬಂದ ಆದು ರಾಥೋಡ್ ಹಾಗೂ ಗೀತಾ ರಾಥೋಡ್ ಸಹ ಪೆಟ್ಟು ಮಾಡಿಕೊಂಡಿದ್ದಾರೆ. ಈ ವೇಳೆ ಮನೋಹರ ಲಮಾಣಿ ಬಡಿಗೆ ತೆಗೆದುಕೊಂಡು ಹೊಡೆದಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸುವಂತೆ ರವಿ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page