6

ಗಂಗಾವಳಿ ಆಳದಲ್ಲಿ ಶೋಧ: ಗೋವಾ ಕಂಪನಿಗೆ ಸಿಕ್ಕಿದ್ದೇನು? ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸರು ಹೇಳಿದ್ದೇನು?

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಹಲವು ವಸ್ತುಗಳನ್ನು ಗೋವಾದ ಡ್ರೆಜ್ಜಿಂಗ್ ಯಂತ್ರ ಕಂಪನಿ ಸೋಮವಾರ ಹೊರತೆಗೆದಿದೆ.

ಲಾರಿಯ ಚಕ್ರ, ವಿದ್ಯುತ್ ತಂತಿ, ಬಟ್ಟೆ ಸೇರಿ ಹಲವು ವಸ್ತುಗಳು ನದಿ ಆಳದಿಂದ ಹೊರಬಂದಿದೆ. ಇದಕ್ಕೆ ಸಂಬoಧಿಸಿದ ವಾರಸುದಾರರ ಕುಟುಂಬದವರು ಸ್ಥಳಕ್ಕೆ ಆಗಮಿಸಿ `ಇದು ತಮ್ಮದು – ಇದು ತಮ್ಮದಲ್ಲ’ ಎಂದು ಖಚಿತಪಡಿಸುತ್ತಿದ್ದಾರೆ.

ಪೊಲೀಸ್ ಅಧೀಕ್ಷಕರ ಸ್ಪಷ್ಠನೆ
`ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಬಿಡುತ್ತಿಲ್ಲ’ ಎಂದು ಮುಳುಗು ತಜ್ಞ ಈಶ್ವರ ಮಲ್ಪೆ ಆರೋಪಕ್ಕೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸ್ಪಷ್ಠನೆ ನೀಡಿದ್ದಾರೆ. `ಈಶ್ವರ ಮಲ್ಪೆ ಸ್ವಯಂ ಪ್ರೇರಣೆಯಿಂದ ಕಾರ್ಯಾಚರಣೆಗೆ ಬಂದಿದ್ದು ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟಿರಲಿಲ್ಲ. ಅದರಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಇದೀಗ ಹೊರಟಿದ್ದಾರೆ. ಈ ಹಿಂದೆ ಜಿಲ್ಲಾಡಳಿತದ ಸಹಕಾರವನ್ನು ಅವರು ಹೊಗಳಿದ್ದರು. ಜಿಲ್ಲಾಡಳಿತ ಅವರ ಸೇವೆ ಬೇಡ ಎಂದು ಎಂದಿಗೂ ಹೇಳಿಲ್ಲ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page