6

ತಿರುಪತಿ ಲಡ್ಡು ತಿಂದವರಿಗೆ ಮೂರುನಾಮ: ನಾಗರಿಕನ ಕಳವಳ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ಧಾರ್ಮಿಕ ಭಕ್ತಿಯನ್ನು ದುರುಪಯೋಗಪಡಿಸಿಕೊಂಡಿದನ್ನು ಖಂಡಿಸಿರುವ ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ರಾಜಕೀಯ ಕುತಂತ್ರದ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.

`ಕೆಲವರ ಕುತಂತ್ರ ರಾಜಕಾರಣದ ಪರಿಣಾಮ ತಿರುಪತಿ ಲಡ್ಡು ಅಪವಿತ್ರಗೊಂಡಿದ್ದು, ದುಷ್ಠಶಕ್ತಿಗಳಿಗೆ ಭಕ್ತರೇ ಬುದ್ದಿ ಕಲಿಸಬೇಕು’ ಎಂದವರು ಹೇಳಿದ್ದಾರೆ. `ನಾವು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಿದ್ದ ಲಡ್ಡುವಿನಲ್ಲಿ ದನ ಹಾಗೂ ಹಂದಿಗಳ ಕೊಬ್ಬು ಸೇರಿಸಲಾಗುತ್ತಿತ್ತು ಎಂಬುದು ಅತ್ಯಂತ ಆಘಾತಕಾರಿ ವಿಷಯ. ಆಂದ್ರದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ, ಜಗನ್ ಮೋಹನ ರೆಡ್ಡಿ ಅವರ ಕೈವಾಡದಿಂದ ಈ ಕೃತ್ಯ ನಡೆದಿದೆ. ಕ್ರಿಸ್ತ ಸಮುದಾಯದ ಸೋನಿಯಾ, ರಾಹುಲ್ ಪ್ರಿಯಾಂಕರAತೆ ಈ ರೆಡ್ಡಿಗಳು ಸಹ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿದ್ದಾರೆ’ ಎಂದವರು ಹೇಳಿದ್ದಾರೆ.

`ಸ್ವಾತಂತ್ರ‍್ಯ ಪೂರ್ವದ 1857ರ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಸಹ ಇಂಥ ಪ್ರಯತ್ನ ನಡೆದಿತ್ತು. ಆಗ ದನ ಹಾಗೂ ಹಂದಿಗಳ ಕೊಬ್ಬನ್ನು ಸವರಿದ ಬಂದೂಕಿನ ತೋಟಾಗಳನ್ನು ಬಳಸಿ ಹಿಂದೂ ಸೈನಿಕರಿಗೆ ತೊಂದರೆ ನೀಡಲಾಗಿತ್ತು. ಆ ವೇಳೆ ನಡೆದ ಸಿಫಾಯಿ ದಂಗೆ ಹೋರಾಟವನ್ನು ಮರೆಯುವಂತಿಲ್ಲ. ಪ್ರಸ್ತುತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದವರ ವಿರುದ್ಧವೂ ಅಂಥ ಹೋರಾಟ ಅಗತ್ಯ’ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page