6

ಸರಾಯಿ ನಶೆಯಲ್ಲಿ ವಿಷ ಕುಡಿದ!

ಯಲ್ಲಾಪುರ: ವಿಪರೀತ ಸರಾಯಿ ಕುಡಿಯುತ್ತಿದ್ದ ಹೆಮ್ಮಾಡಿಯ ವಿಶ್ವನಾಥ ಪ್ರಭಾಕರ ನಾಯ್ಕ (30) ಕೀಟನಾಶಕ ಸೇವಿಸಿ ಸಾವನಪ್ಪಿದ್ದಾನೆ.

ಹೆಮ್ಮಾಡಿ ಕುಂಬ್ರಿಯ ವಿಶ್ವನಾಥ ನಿತ್ಯ ಸರಾಯಿ ಕುಡಿಯುತ್ತಿದ್ದ. ಸೆ 23ರಂದು ದನದ ಕೊಟ್ಟಿಗೆ ಬಳಿ ಹೋದ ಆತ ಅಲ್ಲಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ. ಆತನನ್ನು ಸಂಬoಧಿಕರು ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಟಿಎಸ್‌ಎಸ್ ಆಸ್ಪತ್ರೆಗೆ ಸಾಗಿಸಿದರು. ಅದಾದ ನಂತರ ಉಡುಪಿ, ಮಣಿಪಾಲ್ ಆಸ್ಪತ್ರೆಯಲ್ಲಿ ಕಾಣಿಸಿ ಮತ್ತೆ ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಿದರು. ಸೆ 24ರ ನಸುಕಿನಲ್ಲಿ ಸಾವನಪ್ಪಿದ್ದಾನೆ. ಆತನ ಶವ ಯಲ್ಲಾಪುರ ಆಸ್ಪತ್ರೆಯ ಶವಾಗಾರದಲ್ಲಿದ್ದು, ಕುಮಟಾದಿಂದ ಬಂದ ಆತನ ಮಾವ ಉಮೇಶ ಶಂಡಗೆ ಪೊಲೀಸರಿಗೆ ಮಾಹಿತಿ ನೀಡಿ ಶವ ಬಿಡಿಸಿಕೊಂಡರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page