6

ಶಿರೂರು | ಲಾರಿ ಅರ್ಜುನನ ಶವ ನೂರು ಚೂರು!

ಶಿರೂರು ಗುಡ್ಡ ಕುಸಿತ ಪರಿಣಾಮ ಲಾರಿ ಜೊತೆ ನದಿ ಆಳಕ್ಕೆ ತಲುಪಿದ್ದ ಕೇರಳದ ಅರ್ಜುನನ ಶವ ಚೂರು ಚೂರಾಗಿದೆ.

ಎರಡು ತಿಂಗಳ ಕಾಲ ನದಿ ಆಳದಲ್ಲಿದ್ದ ಶವವನ್ನು ರಕ್ಷಣಾ ಸಿಬ್ಬಂದಿ ಬುಧವಾರ ಹೊರ ತೆಗೆದರು. ಅರ್ಜುನನನ್ನು ನೋಡಲು ಸ್ಥಳದಲ್ಲಿ ನೂರಾರು ಜನ ಆಗಮಿಸಿದ್ದು, ಹಾಗೂ ಅರ್ಜುನನ ಅವಶೇಷಗಳನ್ನು ನೋಡಿ ಮರುಕ ವ್ಯಕ್ತಪಡಿಸಿದರು. ನದಿ ಆಳದಲ್ಲಿದ್ದ ಲಾರಿಯ ಕ್ಯಾಬಿನ್’ನ್ನು ಕ್ರೇನ್ ಮೂಲಕ ಮೇಲೆ ತರಲಾಯಿತು. ಈ ವೇಳೆ ಲಾರಿಯಲ್ಲಿದ್ದ ಅರ್ಜುನನ ಶವವನ್ನು ರಕ್ಷಣಾ ಸಿಬ್ಬಂದಿ ಬೋಟಿಗೆ ದಾಟಿಸಿಕೊಂಡರು. ಅರ್ಜುನನ ಶವ ಸಂಪೂರ್ಣ ಬೆಂಡಿನoತಾಗಿದ್ದು, ಶವವನ್ನು ಎತ್ತಿ ಬೋಟಿಗೆ ಹಾಕುವ ವೇಳೆ ಎಚ್ಚರಿಕೆವಹಿಸಲಾಯಿತು. ಉತ್ತರ ಕನ್ನಡ ಜಿಲ್ಲಾಡಳಿತದ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಗೆ ಸಾಕ್ಷಿಯಾದರು.

ನದಿ ಆಳದಲ್ಲಿದ್ದ ಲಾರಿ ಹಾಗೂ ಲಾರಿಯಲ್ಲಿ ಸಿಲುಕಿದ್ದ ಶವ ಮೇಲೆತ್ತಿದ ವಿಡಿಯೋ ಇಲ್ಲಿ ನೋಡಿ..

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page