6

ಜನರೇಟರ್ ಬಡಿದು ಪಾದಚಾರಿಗೆ ಗಾಯ: ಮೂವರ ವಿರುದ್ಧ ದೂರು

ಶಿರಸಿ: ಸಂಚರಿಸುತ್ತಿದ್ದ ಪಿಕಪ್ ವಾಹನದಿಂದ ಕೆಳಗೆ ಬಿದ್ದ ಜನರೆಟರ್ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ.

ವಿನಾಯಕ ಮಂಜುನಾಥ ನಾಯ್ಕ ಎಂಬಾತರಿಗೆ ಜನರೇಟರ್ ಅಗತ್ಯವಿದ್ದ ಕಾರಣ ಬಾಪೂಜಿ ನಗರದ ರಾಘವೇಂದ್ರ ರವಿ ಮಡಿವಾಳ ಒಡೆತನದ ಮಹೇಂದ್ರ ಬುಲೆರೋದಲ್ಲಿ ಜನರೇಟರ್ ಸಾಗಿಸಲಾಗುತ್ತಿತ್ತು. ಚಾಲಕ ದರ್ಶನ ಪ್ರಕಾಶ ಮಡಿವಾಳ ಎಂಬಾತರು ವಾಹನಕ್ಕೆ ಜನರೇಟರ್ ಕಟ್ಟಿಕೊಂಡು ಸಂಚರಿಸುತ್ತಿದ್ದರು. ಕೆಎಸ್‌ಆರ್‌ಟಿಸಿ ಡಿಪೋ ಬಳಿ ಸಂಚರಿಸುತ್ತಿದ್ದಾಗ ವಾಹನದಿಂದ ಜನರೇಟರ್ ಟ್ರಾಲಿ ಕೆಳಗೆ ತಪ್ಪಿದ್ದು, ಅಲ್ಲಿ ನಡೆದು ಹೋಗುತ್ತಿದ್ದ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಜನರೇಟರ್ ಗುದ್ದಿದೆ.

ಅಪಘಾತದ ವಿಷಯ ಅರಿತರೂ ಗಣೇಶ ನಗರದ ಚಾಲಕ ದರ್ಶನ ಮಡಿವಾಳ ವಾಹನ ನಿಲ್ಲಿಸಿಲ್ಲ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡಿಲ್ಲ. ಈ ಹಿನ್ನಲೆ ದರ್ಶನ ಮಡಿವಾಳ, ರವಿ ಮಡಿವಾಳ, ವಿನಾಯಕ ಮಂಜುನಾಥ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page