6

ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ

ಶಿರಸಿ: ಕೆಲಸದ ವಿಷಯವಾಗಿ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ ನಡೆದಿದೆ.

ಗೌಂಡಿ ಕೆಲಸ ಮಾಡುವ ಅಣ್ಣಪ್ಪ ಮಲ್ಲೇಶಪ್ಪ ಹುಲ್ಲಾಳ ಹಾಗೂ ಅದೇ ಕೆಲಸ ಮಾಡುವ ಶಂಕರ ತೆಂಗಪ್ಪ ನಾಯ್ಕ ಹೊಡೆದಾಡಿಕೊಂಡಿದ್ದಾರೆ. ಎಸಳೆ ರಸ್ತೆಯ ಕಸದಗುಡ್ಡೆ ಬಳಿಯವರಾಗಿದ್ದು, ಶಂಕರ್ ಸಹ ಎಸಳೆ ರಸ್ತೆಯ ನಿವಾಸಿ. ಇವರಿಬ್ಬರು ಸ್ನೇಹಿತರಾಗಿದ್ದರೂ ಸಹ ಕೆಲಸದ ವಿಷಯವಾಗಿ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಗಾಯಗೊಂಡ ಅಣ್ಣಪ್ಪ ಟಿಎಸ್‌ಎಸ್ ಆಸ್ಪತ್ರೆ ಸೇರಿದ್ದಾರೆ.

ಸೆ 25ರ ಸಂಜೆ ಶಿರಸಿಯ ಕ್ವಾಲಿಟಿ ವೈನ್ಸ ಬಳಿ ಅಣ್ಣಪ್ಪ ಹಾಗೂ ಶಂಕರ್ ಮಾತನಾಡುತ್ತಿದ್ದರು. ಈ ವೇಳೆ `ನನ್ನ ಕೆಲಸದ ಬಗ್ಗೆ ನೀನು ಮಾತನಾಡಬೇಡ’ ಎಂದು ಶಂಕರ್ ಅಣ್ಣಪ್ಪಗೆ ಎಚ್ಚರಿಕೆ ನೀಡಿದ್ದು, ಇದೇ ವಿಷಯವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಆಗ ಅಲ್ಲಿದ್ದ ಗಾಜಿನ ಲೋಟದಲ್ಲಿ ಶಂಕರ್ ಅಣ್ಣಪ್ಪ ಅವರ ತಲೆಗೆ ಕುಟ್ಟಿ, ಮುಖಕ್ಕೆ ಗೀರಿದ್ದಾರೆ. ಇದರಿಂದ ಅಣ್ಣಪ್ಪ ಗಾಯಗೊಂಡಿದ್ದಾರೆ.

ನoತರ ಅಲ್ಲಿದ್ದವರು ಗಾಯಾಳುವನ್ನು ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡ ಅಣ್ಣಪ್ಪ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page