6

ಗಟಾರಕ್ಕೆ ಉರುಳಿದ ಕಳಚೆ ಬಸ್ಸು

ಯಲ್ಲಾಪುರ: ಈರಾಪುರದಿಂದ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿದ್ದ ಸರ್ಕಾರಿ ಬಸ್ಸು ಭಾನುವಾರ ಬೆಳಗ್ಗೆ ಗಟಾರಕ್ಕೆ ಬಿದ್ದಿದೆ.

ಎದುರಿನಿಂದ ಬಂದ ಬೈಕ್ ತಪ್ಪಿಸುವ ಬರದಲ್ಲಿ ಬಸ್ಸು ಅಪಘಾತವಾಗಿದೆ. ಶನಿವಾರ ಸಂಜೆ ಈ ಬಸ್ಸು ಈರಾಪುರಕ್ಕೆ ತೆರಳಿತ್ತು. ರಾತ್ರಿ ಅಲ್ಲಿಯೇ ವಸತಿಯಿದ್ದು, ಭಾನುವಾರ ಬೆಳಗ್ಗೆ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿತ್ತು. ಈ ನಡುವೆ ಬಸ್ಸು ರಸ್ತೆ ಅಂಚಿನ ಗಟಾರಕ್ಕೆ ಉರುಳಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಟೇರಿಂಗ್ ಕಟ್ ಆಗಿದ್ದರಿಂದ ಬಸ್ಸು ಮರಕ್ಕೆ ಸಿಲುಕಿದ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, `ಎದುರಿನಿಂದ ಬಂದ ಬೈಕ್’ಗೆ ಡಿಕ್ಕಿ ಆಗುವುದನ್ನು ತಪ್ಪಿಸುವಾಗ ಬಸ್ಸು ರಸ್ತೆ ಅಂಚಿಗೆ ಹಾಕಲಾದ ಮಣ್ಣಿಗೆ ಇಳಿದಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು. ಬಸ್ಸಿನ ಒಳಗಿದ್ದ ಕೆಲ ಪ್ರಯಾಣಿಕರಿಗೆ ತೆರಚಿದ ಗಾಯಗಳಾಗಿದ್ದು, ಯಾರೂ ಆತಂಕ ಪಡಬೇಕಾಗಿಲ್ಲ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page