ಯಲ್ಲಾಪುರ: ವಿಶ್ವ ಹಿಂದು ಪರಿಷತ್ ಜೊತೆ ನಾಗರಿಕ ವೇದಿಕೆ ಸದಸ್ಯರು ಸೇರಿ ಸ್ಮಶಾನ ಭೂಮಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ.
ಸ್ಮಶಾನದಲ್ಲಿ ಶ್ರಮದಾನ ನಡೆಸಿದ ಎಲ್ಲರಿಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರಮದಾನದ ಮಾದರಿಯಲ್ಲಿಯೇ ಹಿಂದು ರುದ್ರಭೂಮಿ ಅಭಿವೃದ್ಧಿ ಅಭಿಯಾನಕ್ಕೂ ಜನರ ಸಹಕಾರ ಅಗತ್ಯ ಎಂದವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಸ್ಮಶಾನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ವಿ.ಹಿಂ.ಪ. ಜಿಲ್ಲಾ ಅಧ್ಯಕ್ಷ ಎಸ್. ಎನ್. ಭಟ್ಟ ಏಕಾನ, ಪ ಪಂ ಉಪಾಧ್ಯಕ್ಷ ಅಮಿತ ಅಂಗಡಿ ಸೇರಿ ಈ ಕೆಲಸಕ್ಕೆ ನೆರವು ನೀಡಿದ ಎಲ್ಲರ ಸಹಕಾರವನ್ನು ರಾಮು ನಾಯ್ಕ ಸ್ಮರಿಸಿದ್ದಾರೆ.








