6

ಕುಟುಂಬದವರ ಅಸಡ್ಡೆ: ಮಾನಸಿಕ ಅಸ್ವಸ್ಥೆಗೆ ಮುಕ್ತಿ ನೀಡಲಿರುವ ಸಮಾನ ಮನಸ್ಕರ ತಂಡ

ಕಾರವಾರ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಿನ್ನರ ಮೂಲದ ಪವಿತ್ರ ನಾಯ್ಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಮಾನ ಮನಸ್ಕರೆಲ್ಲ ಸೇರಿ ಕಾರವಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಿದ್ದಾರೆ.

ಪವಿತ್ರ ನಾಯ್ಕ ಅವರ ಪತಿ ಒಂದು ವರ್ಷದ ಹಿಂದೆ ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದರು. ಕುಟುಂಬದವರಿದ್ದರೂ ಸಹ ಕಾಳಜಿ ತೆಗೆದುಕೊಳ್ಳದ ಕಾರಣ ಮಾನಸಿಕ ಅಸ್ವಸ್ಥತೆಯಿಂದ ನಗರದಲ್ಲಿ ಸುತ್ತಾಡುತ್ತಿದ್ದ ಪವಿತ್ರ ಅವರಿಗೆ ಎಲ್ಲಿಯಾದರೂ ಆರೈಕೆ ಕೊಡಿಸುವಂತೆ ಸೆ 11ರಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರಿಗೆ ಕರೆ ಬಂದಿತ್ತು. ಅದರಂತೆ ಪವಿತ್ರ ಅವರು ಅಲೆದಾಡುತ್ತಿದ್ದ ಬಾಂಡಿಶಿಟ್ಟಾಕ್ಕೆ ತಕ್ಷಣವೇ ಪೊಲೀಸರೊಂದಿಗೆ ತೆರಳಿ ಅವರನ್ನು ಮಾಧವ ನಾಯಕ ಸ್ವೀಕಾರ ಕೇಂದ್ರಕ್ಕೆ ಕರೆದೊಯ್ದು ದಾಖಲಿಸಿದ್ದರು.

ಸ್ವೀಕಾರ ಕೇಂದ್ರದಲ್ಲಿ ಗರ್ಭಿಣಿಯರು ಸೇರಿದಂತೆ ಇನ್ನಿತರ ಮಹಿಳೆಯರು ಇದ್ದಿದ್ದರಿಂದ ಹಾಗೂ ಪವಿತ್ರ ಅವರು ಅಲ್ಲಿ ಗಲಾಟೆ ಮಾಡಿ ಗಾಜುಗಳನ್ನೆಲ್ಲ ಒಡೆದಿದ್ದರಿಂದ ಅವರನ್ನು ನ್ಯಾಯಾಲಯದ ಸೂಚನೆಯ ಮೇರೆಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು. ಅವರಿಗೆ ಥೈರಾಯ್ಡ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯೂ ಇದ್ದ ಕಾರಣ ಡಿಮ್ಹಾನ್ಸ್ನವರು ಕಿಮ್ಸ್’ಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ.ಅವರ ಅಂತ್ಯಕ್ರಿಯೆ ನಡೆಸಲು ಮಹಿಳಾ ಸ್ವೀಕಾರ ಕೇಂದ್ರಕ್ಕೆ ನ್ಯಾಯಾಲಯ ಸೂಚಿಸಿದೆ. ಕಿನ್ನರದಲ್ಲಿರುವ ಅವರ ಕುಟುಂಬದವರು ಅಸಡ್ಡೆ ತೋರಿದ ಹಿನ್ನಲೆ ಸಮಾನ ಮನಸ್ಕರೆಲ್ಲರೂ ಸೇರಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page