6

ಬೌದ್ಧ ಸನ್ಯಾಸಿ ಬದುಕು ಅಂತ್ಯಗೊಳಿಸಿದ ಬೈಕ್ ಸವಾರ

ಮುಂಡಗೋಡ: ರಸ್ತೆ ಬದಿ ನಡೆದು ಹೋಗುತ್ತಿದ್ದ ಬೌದ್ಧ ಸನ್ಯಾಸಿ ಕುಂಚೋಕ್ ಗಯಾಲ್ಟ್ಸೆನ್ (65) ಬೈಕ್ ಗುದ್ದಿದ ಪರಿಣಾಮ ಸಾವನಪ್ಪಿದ್ದಾರೆ.

ಲಾಮಾ ಕ್ಯಾಂಪಿನಲ್ಲಿ ವಾಸವಾಗಿದ್ದ ಕುಂಚೋಕ್ ಗಯಾಲ್ಟ್ಸೆನ್ ಸೆ 6ರಂದು ಮಧ್ಯಾಹ್ನ ತಮ್ಯಾನಕೊಪ್ಪ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಜೋರಾಗಿ ಬೈಕ್ ಓಡಿಸಿಕೊಂಡು ಬಂದ ತಟ್ಟಿಹಳ್ಳದ ರಂಗನಾಥ ಯಲ್ಲಪ್ಪ ಶಿಗ್ಗಾವಿ ಹಿಂದಿನಿoದ ಸನ್ಯಾಸಿಗೆ ಬೈಕ್ ಗುದ್ದಿದರು. ಇದರಿಂದ ಕುಂಚೋಕ್ ಗಯಾಲ್ಟ್ಸೆನ್ ನೆಲಕ್ಕೆ ಅಪ್ಪಳಿಸಿ ಮುಖ-ಹಣೆಗೆ ಪೆಟ್ಟು ಮಾಡಿಕೊಂಡು ಸಾವನಪ್ಪಿದ್ದಾರೆ.

ಬೈಕ್ ಸವಾರ ರಂಗನಾಥ ಯಲ್ಲಪ್ಪ ಶಿಗ್ಗಾವಿ ಜೊತೆ ಬೈಕಿನಲ್ಲಿ ಹಿಂದೆ ಕೂತಿದ್ದ ತಟ್ಟಿಹಳ್ಳದ ಗಂಗವ್ವ ಉಳುವಪ್ಪ ಹೊನ್ನಳ್ಳಿ ಅವರಿಗೂ ಗಾಯವಾಗಿದೆ. ಇನ್ನೊಬ್ಬ ಬೌದ್ಧ ಸನ್ಯಾಸಿ ತಂಜಿನ್ ಮಂಗೂರೆ ಪೊಲೀಸ್ ದೂರು ನೀಡಿದ್ದಾರೆ.

ಕಾಣೆಯಾದ ಗಂಡನಿಗಾಗಿ ಪತ್ನಿಯ ಅಲೆದಾಟ

ಸಿದ್ದಾಪುರ: ಕೊಂಡ್ಲಿಯ ಜಗದೀಶ ಈರಾ ನಾಯ್ಕ (42) ಕಣ್ಮರೆಯಾಗಿದ್ದಾರೆ.

ಕೃಷಿ ಕೆಲಸ ಮಾಡಿಕೊಂಡಿದ್ದ ಅವರು ಮದ್ಯ ವ್ಯಸನಿಯಾಗಿದ್ದರು. ಮದ್ಯ ಸೇವನೆ ಮಾಡಿದಾಗ ಮದ್ಯ ವ್ಯಸನಿಯಾಗಿದ್ದ ಅವರು ವ್ಯಸನದ ನಂತರ ಮಾನಸಿಕವಾಗಿ ಬದಲಾಗುತ್ತಿದ್ದರು. ಮದ್ಯ ಸೇವನೆ ಮಾಡಿದಾಗ ವಿಪರೀತ ಮಾತನಾಡುತ್ತಿದ್ದರು. ನಶೆಯಲ್ಲಿದ್ದಾಗ ಅಸಂಬದ್ಧವಾಗಿ ಮಾತನಾಡುತ್ತಿದ್ದರು. ಅಕ್ಟೋಬರ್ 5ರಂದು ಮನೆಯಿಂದ ಹೊರಗೆ ಹೋದ ಅವರು ಈವರೆಗೂ ಮನೆಗೆ ಮರಳಿಲ್ಲ. ಎಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ಈ ಹಿನ್ನಲೆ ಅವರ ಪತ್ನಿ ರೇಣುಕಾ `ಗಂಡನನ್ನು ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page