6

ಸ್ವಾಮಿ ಶರಣಂ | ರಕ್ಷಣೆ ನೀಡುವವರಿಂದಲೇ ದಬ್ಬಾಳಿಕೆ: ಅಯ್ಯಪ್ಪ ಭಕ್ತರಿಗೆ ಅನಗತ್ಯ ಕಿರುಕುಳ!

ಕಾರವಾರ: ಅಯ್ಯಪ್ಪ ಸ್ವಾಮಿ ಭಕ್ತರು ಚಲಿಸುತ್ತಿದ್ದ ವಾಹನಕ್ಕೆ ನೌಕಾ ಸಿಬ್ಬಂದಿ ವಾಹನಕ್ಕೆ ಸ್ಪರ್ಶವಾಗಿದ್ದು, ಇದನ್ನು ಸಹಿಸದ ನೌಕಾನೆಲೆ ಸಿಬ್ಬಂದಿ ಭಕ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ನೌಕಾ ಸಿಬ್ಬಂದಿ ವಿರುದ್ಧ ಅಯ್ಯಪ್ಪ ಭಕ್ತರು ಪ್ರತಿಭಟಿಸಿದ್ದಾರೆ.

ಭಾನುವಾರ ರಾತ್ರಿ ಮುದುಗಾ ಬಳಿ ಅಯ್ಯಪ್ಪ ಮಾಲಾಧಾರಿ ಶ್ರೀನಿವಾಸ ಅವರ ವಾಹನಕ್ಕೆ ನೌಕಾನೆಲೆ ಸಿಬ್ಬಂದಿ ವಾಹನ ಡಿಕ್ಕಿಯಾಗಿದೆ. ಇದರಿಂದ ಶ್ರೀನಿವಾಸ ಅವರಿಗೆ ಅಲ್ಪ ಪ್ರಮಾಣದ ಗಾಯವಾಗಿದೆ. ಶ್ರೀನಿವಾಸ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಮರಳಿ ತರುವಾಗ ಅಡ್ಡಗಟ್ಟಿದ ನೌಕಾ ಸಿಬ್ಬಂದಿ ಅವರನ್ನು ಥಳಿಸಿದ್ದಾರೆ.

ನೌಕಾನೆಲೆ ಸಿಬ್ಬಂದಿಯು ತನ್ನ 20ಕ್ಕೂ ಅಧಿಕ ಜನರ ಜೊತೆ ಜಮಾಯಿಸಿ ಗಾಯಗೊಂಡ ಶ್ರೀನಿವಾಸರ ಮೇಲೆ ಹಲ್ಲೆ ಮಾಡಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಹಲ್ಲೆ ಮಾಡಿದ ಎಲ್ಲರನ್ನು ಬಂಧಿಸಬೇಕು ಎಂದು ಪಟ್ಟು ಹಿಡಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

    Share this… Facebook Pinterest Twitter Linkedin Whatsappನದಿ ಜೋಡಣೆ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ ಪತ್ರ ವರದಾ ಬೆಡ್ತಿ ನದಿ ಜೋಡಣೆಯ ಡಿಪಿಆರ್ ತ್ವರಿತಗತಿಯಲ್ಲಿ ಸಿದ್ದಪಡಿಸಿ ಕೇಂದ್ರಕ್ಕೆ ಕಳುಹಿಸಲು ಸಿಎಂಗೆ ಸಂಸದ ಬಸವರಾಜ ಬೊಮ್ಮಾಯಿ…

    You cannot copy content of this page