6
  • Latest

ಆಸ್ಪತ್ರೆ ಆವರಣವೂ ಸುರಕ್ಷಿತವಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಸ್ಪತ್ರೆ ಆವರಣವೂ ಸುರಕ್ಷಿತವಲ್ಲ!

AchyutKumar by AchyutKumar
October 9, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಸ್ವಂತ ಬೈಕಿನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಮಾಜಾಳಿಯ ಗ್ರಾಮ ಲೆಕ್ಕಾಧಿಕಾರಿ ದೀಪಕ ನಾಯ್ಕ ಇದೀಗ ಅವರಿವರ ವಾಹನ ಏರಿ ಊರೂರು ಅಲೆದಾಡುತ್ತಿದ್ದಾರೆ. ಕಾರಣ ಜಿಲ್ಲಾ ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದ ಅವರ ಬೈಕ್ ಕಳ್ಳತನವಾಗಿದೆ.

ನಂದನಗದ್ದಾದಲ್ಲಿ ವಾಸವಿರುವ ದೀಪಕ ರಮಾಕಾಂತ ನಾಯ್ಕ ಅವರ ಮಗ ಅನಾರೋಗ್ಯಕ್ಕೀಡಾಗಿದ್ದು, ಈ ಹಿನ್ನಲೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಅವಧಿಯಲ್ಲಿ ಸಹ ಆಸ್ಪತ್ರೆಯಲ್ಲಿ ಪುತ್ರನ ಜೊತೆ ಅವರು ಇರುತ್ತಿದ್ದರು. ಅ. 3ರ ರಾತ್ರಿ ಕೊನೆಯದಾಗಿ ಅವರು ಬೈಕಿನಲ್ಲಿ ಸಂಚರಿಸಿದ್ದು, ಆ ಬೈಕನ್ನು ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿದ್ದರು. ಅ 4ರ ಬೆಳಗ್ಗೆ ಅಲ್ಲಿ ಹೋಗಿ ನೋಡಿದಾಗ ಬೈಕ್ ಕಾಣಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಅವರ ಬೈಕ್ ಸಿಗಲಿಲ್ಲ. ತುರ್ತು ಕೆಲಸದ ನಿಮಿತ್ತ ಪೇಟೆಗೆ ಹೋಗಲು ಸಹ ಅವರು ಆ ದಿನ ತೊಂದರೆ ಅನುಭವಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಬೈಕ್ ಕಳೆದುಕೊಂಡ ಅವರು ಇದೀಗ ಗ್ರಾಮೀಣ ಭಾಗಕ್ಕೆ ಜನ ಸೇವೆಗೆ ತೆರಳಲು ಸಮಸ್ಯೆ ಅನುಭವಿಸುತ್ತಿದ್ದಾರೆ. `ತನ್ನ ಬೈಕ್ ಹುಡುಕಿಕೊಡಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಆಸ್ಪತ್ರೆಗೆ ಆಗಮಿಸಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಆದರೆ, ಬೈಕ್ ಕಳ್ಳತನವಾದ ದಿನ ಕ್ಯಾಮರಾ ದೇವರ ವಿಗ್ರಹದ ಕಡೆ ನೋಡುತ್ತಿದ್ದು, ಕಳ್ಳರ ಪತ್ತೆಗೆ ನೆರವಾಗಿಲ್ಲ. ಕಳ್ಳತನಕ್ಕೂ ಮುನ್ನ ಕ್ಯಾಮರಾ ಮುಖ ತಿರುಗಿಸಿರುವ ಅನುಮಾನ ಕಾಡುತ್ತಿದೆ.

Advertisement. Scroll to continue reading.

ಇನ್ನೂ ಜಿಲ್ಲಾ ಆಸ್ಪತ್ರೆ ಹೊರಭಾಗ ಬೀದಿ ದೀಪಗಳಿದ್ದರೂ ರಾತ್ರಿ ವೇಳೆ ಸರಿಯಾಗಿ ಉರಿಯುವುದಿಲ್ಲ. ಸಿಸಿ ಕ್ಯಾಮರಾ ಇದ್ದರೂ ಅದು ಎಲ್ಲಾ ಕಡೆ ನಿಗಾವಹಿಸುತ್ತಿಲ್ಲ. ಹೀಗಾಗಿ ಬೈಕ್ ಕದ್ದ ಆರೋಪಿಗಳನ್ನು ಪತ್ತೆ ಮಾಡಲು ಈವರೆಗೂ ಪೊಲೀಸರಿಂದ ಆಗಿಲ್ಲ. ಗ್ರಾಮ ಆಡಳಿತಾಧಿಕಾರಿಯ ವಾಹನ ಸಮಸ್ಯೆ ಬಗೆಹರಿದಿಲ್ಲ.

ShareSendTweetShare
ADVERTISEMENT
Previous Post

ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಸಿದವರಾರು?

Next Post

ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

Next Post

ಹಬ್ಬಕ್ಕೆ ಹೊರಟ ಯುವತಿ ಕಣ್ಮರೆ: ಊರಿಗೆ ಬಂದವಳು ಮನೆಗೆ ಬರಲಿಲ್ಲ!

ಬಡವರ ಒತ್ತುವರಿ ತೆರವು ಇಲ್ಲ: ಅರಣ್ಯ ಅತಿಕ್ರಮಣದಾರರಿಗೆ ಸಚಿವರ ಅಭಯ

ಎರಡು ಲಕ್ಷದ ಸೇತುವೆಗೆ ಆರೇ ತಿಂಗಳ ಭವಿಷ್ಯ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.