ಶಿರಸಿ: ಮುಂಡಗೋಡು – ಶಿರಸಿ ರಸ್ತೆ ನಡುವೆ ನಡೆದ ಅಪಘಾತದಲ್ಲಿ ಬಿಸಿಲಕೊಪ್ಪದ ಉಂಡಾಡಿಕಟ್ಟೆ ಬಳಿಯ ರವಿ ಭಟ್ಟ ಎಂಬಾತರು ಸಾವನಪ್ಪಿದ್ದಾರೆ.
ಶುಕ್ರವಾರ ಬೆಳಗ್ಗೆ ಮುಂಡಗೋಡಿನಿ0ದ ಶಿರಸಿ ಮಾರ್ಗವಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದ ರವಿ ಅವರಿಗೆ ಮಾವಿನಕೊಪ್ಪಾ ಬಳಿ ಎದುರಿನಿಂದ ಬಂದ ಟಾಟಾಎಸ್ ವಾಹನ ಗುದ್ದಿದೆ. ಪರಿಣಾಮ ತಲೆಗೆ ಪೆಟ್ಟಾಗಿ ಅವರು ನೆಲಕ್ಕೆ ಬಿದ್ದಿದ್ದು, ಆಂಬುಲೆನ್ಸ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನಪ್ಪಿದ್ದಾರೆ.
ಆಂಬುಲೈನ್ಸ ಚಾಲಕನ ವಿರುದ್ಧ ಆಕ್ರೋಶ
ಈ ಅಪಘಾತ ನಡೆದ ತಕ್ಷಣ ಸ್ಥಳೀಯರು ಆಂಬುಲೆನ್ಸ್’ಗೆ ಫೋನ್ ಮಾಡಿ ಮಾಹಿತಿ ನೀಡಿದ್ದು, ಆಂಬುಲೆನ್ಸ ಬರಲು ತಡವಾಗಿದಕ್ಕಾಗಿ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಆಂಬುಲೈನ್ಸ ಚಾಲಕನನ್ನು ಕೆಟ್ಟದಾಗಿ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಆಂಬುಲೆನ್ಸ ಜೊತೆ ಚಾಲಕ ಮಾತ್ರ ಬಂದಿದ್ದು, ತುರ್ತು ಚಿಕಿತ್ಸೆ ನೀಡುವ ಸಿಬ್ಬಂದಿ ಇರಲಿಲ್ಲ. ಆಂಬುಲೆನ್ಸ ಒಳಭಾಗದಲ್ಲಿ ಆಕ್ಸಿಜನ್ ಸಹ ಇರಲಿಲ್ಲ. ಹೀಗಾಗಿ ಜನ ವ್ಯವಸ್ಥೆಯ ಬಗ್ಗೆ ದೂರಿದ್ದಾರೆ. ಈ ವೇಳೆ ಚಾಲಕನನ್ನು ಸಹ ನಿಂದಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತ ಸನ್ನಿವೇಶ ಹಾಗೂ ಆಂಬುಲೈನ್ಸ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾದ ವಿಡಿಯೋ ಇಲ್ಲಿ ನೋಡಿ..



