ಭಟ್ಕಳ: ಮೀನುಗಾರ ಮಂಜುನಾಥ ನಾಗಪ್ಪ ನಾಯ್ಕ ಎಂಬಾತರ ಮೇಲೆ ಮುಂಡಳ್ಳಿಯ ಮಾರುತಿ ಮೊಗೇರ ಎಂಬಾತ ಹಲ್ಲೆ ಮಾಡಿದ್ದು, ಪೊಲೀಸ್ ದೂರು ದಾಖಲಾಗಿದೆ.
ಅಕ್ಟೊಬರ್ 11ರ ನಸುಕಿನಲ್ಲಿ ಮಂಜುನಾಥ ನಾಯ್ಕರು ಮೀನುಗಾರಿಕೆಗೆ ಹೊರಟಿದ್ದರು. ಅಳ್ವೆಕೊಡಿ ಬಂದರಿಗೆ ಅವರು ಹೋಗುತ್ತಿರುವಾಗ ಕನ್ನಡಶಾಲೆಯ ಬಳಿ ಮಾರುತಿ ಮೊಗೇರ್ ಆಗಮಿಸಿ ಕಲ್ಲಿನಿಂದ ಹೊಡೆದಿದ್ದಾನೆ. ನಂತರ ಕೆಟ್ಟದಾಗಿ ಬೈದು, ಕೆನ್ನೆಯ ಮೇಲೆ ಗುದ್ದಿದ್ದಾನೆ. ಮಂಜುನಾಥರ ಕೈ ಹಿಡಿದು ಎಳೆದ ಆತ ಕಿವಿಗೆ ರಕ್ತ ಬರುವಂತೆ ಕಚ್ಚಿ ಅಲ್ಲಿಂದ ತೆರಳಿದ್ದಾನೆ. ಗಾಯಗೊಂಡ ಮಂಜುನಾಥ ನಾಯ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.