ಶಿರಸಿ: ವಿದೇಶಗಳಲ್ಲಿ ಸಾಮಾನ್ಯವಾಗಿರುವ ವಿವಾಹವಾಗದೇ ಗಂಡು-ಹೆಣ್ಣು ಒಟ್ಟಿಗೆ ಬದುಕುವ `ಲಿವಿಂಗ್ ಟೂಗೆದರ್’ ಸಂಸ್ಕೃತಿ ಶಿರಸಿಗೂ ವ್ಯಾಪಿಸಿದೆ. ವಯಸ್ಸಿನಲ್ಲಿ ತನಗಿಂದ ದೊಡ್ಡವಳಾದ ಹಾಗೂ ಇಬ್ಬರು ದೊಡ್ಡ ಮಕ್ಕಳನ್ನು ಹೊಂದಿದ ಮಹಿಳೆ ಜೊತೆ ಸಂಬoಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ನೆನಪಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾರವಾರದ ಕಡವಾಡ ಮಾಡಿಭಾಗದ ಸತೀಶ್ ರೇವಣಕರ್ (48) ಶಿರಸಿಯ ಬಿ ಆರ್ ಎಸ್ ಆರ್ಕೀಡ್’ನಲ್ಲಿ ವಾಸವಾಗಿದ್ದ. ನವನೀತ ಶೆಟ್ಟಿ ಅವರ ವೈನ್‌ಶಾಫ್’ನಲ್ಲಿ ಕಳೆದ 12 ವರ್ಷಗಳಿಂದ ಆತ ಕೆಲಸ ಮಾಡುತ್ತಿದ್ದ. ಅಲ್ಲಿ ಸೇಲ್ಸಮೆನ್ ಆಗಿದ್ದವನಿಗೆ ಮಹಿಳೆಯೊಬ್ಬರ ಪರಿಚಯವಾಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದರು. ಆದರೂ, ಸತೀಶ್ ಆ ಮಹಿಳೆಯನ್ನು ಪ್ರೀತಿಸಿದ್ದ. ಆಕೆಯೂ ಈತನ ಪ್ರೀತಿ ಮನ್ನಿಸಿದ್ದಳು. ಹೀಗಾಗಿ ಕಳೆದ ಒಂದುವರೆ ವರ್ಷಗಳಿಂದ ಇಬ್ಬರು ಒಟ್ಟಿಗೆ ಇದ್ದರು. ಆದರೆ, ಮದುವೆ ಆಗಿರಲಿಲ್ಲ.
ಆಕೆಯನ್ನು ಮದುವೆ ಆಗುವುದಾಗಿ ಸತೀಶ್ ರೇವಣಕರ್ ತನ್ನ ಅಣ್ಣ ಸರ್ವೇಶ್ ರೇವಣಕರ್ ಬಳಿ ಹೇಳಿಕೊಂಡಿದ್ದ. ಕಾರವಾರದಲ್ಲಿರುವ ಅಣ್ಣ ಫೋನ್ ಮಾಡಿದಾಗಲೆಲ್ಲ ಆಕೆಯ ಬಗ್ಗೆಯೇ ಸತೀಶ ಹೇಳಿಕೊಳ್ಳುತ್ತಿದ್ದ. ಆದರೆ, ಆ ಮಹಿಳೆ ಮದುವೆ ನಿರಾಕರಿಸಿದ್ದಳು. ಕಳೆದ ಒಂದು ತಿಂಗಳಿನಿoದ ಸತೀಶನನ್ನು ದೂರ ಮಾಡಿದ್ದಳು. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಸತೀಶ ಈ ವಿಷಯವನ್ನು ಸಹ ಸಹೋದರನಲ್ಲಿ ಹೇಳಿಕೊಂಡಿದ್ದ.
`ಅವಳನ್ನು ಬಿಟ್ಟು ತನ್ನಿಂದ ಬದುಕಲು ಆಗುತ್ತಿಲ್ಲ. ಸಾಯಬೇಕು ಅನಿಸುತ್ತಿದೆ’ ಎಂದು ಸತೀಶ ರೇವಣಕರ್ ತನ್ನ ಸಹೋದರ ಸರ್ವೇಶ ರೇವಣಕರ್ ಬಳಿ ಹೇಳಿದ್ದ. ಆಕೆಯ ನೆನಪಿನಲ್ಲಿಯೇ ಸರಾಯಿ ಕುಡಿಯಲು ಶುರು ಮಾಡಿದ್ದ. ವಿಪರೀತ ಸರಾಯಿ ಚಟಕ್ಕೆ ಬಿದ್ದ ಸತೀಶ ರೇವಣಕರ್, ಅಕ್ಟೊಬರ್ 22ರಂದು ಬೆಳಗ್ಗೆ ಸರಾಯಿ ಅಂಗಡಿ ಕೆಲಸಕ್ಕೆ ಬಂದಿದ್ದ. ಹೊಸಪೇಟೆ ರಸ್ತೆಯಲ್ಲಿರುವ `ಚಿರ‍್ಸ ವೈನ್‌ಆಂಡ್ ಸ್ಪಿರಿಟ್’ ಮಳಿಗೆಗೆ ಬಂದ ಆತ ಸರಾಯಿ ಬಾಟಲಿಗಳನ್ನು ಒಳಗಡೆ ಜೋಡಿಸಿಟ್ಟಿದ್ದ. ಮಧ್ಯಾಹ್ನ ಊಟ ಮಾಡಿ ಬರುವುದಾಗಿ ಹೋದವ ಮರಳಿ ಬಂದಿರಲಿಲ್ಲ.
ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಹೋದ ಅವ 3 ಗಂಟೆಯಾದರೂ ಕೆಲಸಕ್ಕೆ ಬಾರದ ಹಿನ್ನಲೆ ವೈನ್‌ಶಾಪ್ ವೈನ್‌ಶಾಪಿನ ಸಿಬ್ಬಂದಿ ವಿಚಾರಿಸಿದ್ದರು. ತಾನು ವಾಸವಾಗಿದ್ದ ರೂಮಿನಲ್ಲಿ ಸತೀಶ ರೇವಣಕರ್ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಆತನ ಸಹೋದರ ಸರ್ವೇಶ್ ರೇವಣಕರ್ ಪೊಲೀಸರಿಗೆ ಮಾಹಿತಿ ನೀಡಿ, ದೂರು ನೀಡಿದ್ದಾರೆ.