ಸಿದ್ದಾಪುರ: ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರಗಳಲ್ಲಿ ಅಸಮರ್ಪಕ ಜಿಪಿಎಸ್ ಆಗಿರುವ ಕುರಿತು ಅತಿಕ್ರಮಣದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೈತರ ಮೇಲೆ ಅರಣ್ಯ ಸಿಬ್ಬಂದಿ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಬಾಲಭವನದಲ್ಲಿ ನಡೆದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸಭೆಯಲ್ಲಿ ಅನೇಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. `ಸಿದ್ದಾಪುರ ತಾಲೂಕಿನಲ್ಲಿ 6,915 ಜಿಪಿಎಸ್ ಮೇಲ್ಮನವಿ ಉಚಿತವಾಗಿ ಮಾಡುವುದಾಗಿ ರವೀಂದ್ರ ನಾಯ್ಕ ಘೋಷಿಸಿದರು. ಅಸಮರ್ಪಕ ಜಿಪಿಎಸ್‌ಗೆ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ತಿಳಿಸಿದಾಗ ಅದನ್ನು ಅರಣ್ಯವಾಸಿಗಳು ಚಪ್ಪಾಳೆ ಮೂಲಕ ಸ್ವಾಗತಿಸಿದರು.
`ತಲಾತಲಾತರದಿಂದ ಸಾಗುವಳಿ ಮಾಡಿದ ಕೋಟಿಗೆ, ಅಂಗಳ, ಗೊಬ್ಬರ ಗುಂಡಿ, ಗಿಡ-ಮರ ಮತ್ತು ಹುಲ್ಲುಗಾವಲು ಕ್ಷೇತ್ರವನ್ನು ಜಿಪಿಎಸ್’ನಿಂದ ಹೊರಗಿಡಲಾಗಿದೆ’ ಎಂದು ರೈತ ಹೋರಾಟಗಾರ ವೀರಭದ್ರ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. ಹರಿಹರ ನಾಯ್ಕ ಓಂಕಾರ್, ಟಿ.ಎಮ್ ನಾಯ್ಕ ಅವರಗುಡ್ಡ, ಮಧುಕೇಶ್ವರ ನಾಯ್ಕ ಜೋಗಿಮನೆ, ಮಹಾಬಲೇಶ್ವರ ಗೌಡ ಸುಳಗಾರ್ ಇನ್ನಿತರರು ಇದಕ್ಕೆ ಧ್ವನಿಯಾದರು.
ಈ ಸಭೆಯಲ್ಲಿ ಜಯಂತ ನಾಯ್ಕ ಕಾನಗೋಡ, ವೆಂಕಟರಮಣ ನಾಯ್ಕ ಕುಪ್ಪರ್‌ಜಡ್ಡಿ, ಗಣಪ ಗೌಡ ತಾರೇಮನೆ, ಗೋಪಾಲ ನಾಯ್ಕ ಮನಮನೆ, ಖಾಜೀರಾ ಬೇಗಂ ಕಾನಗೋಡ, ಮಂಜುನಾಥ ಣಾಯ್ಕ ಹಾರ್ಸಿಕಟ್ಟಾ, ಸುರೇಶ ನಾಯ್ಕ ಹಾರ್ಸಿಕಟ್ಟಾ, ಗೋವಿಂದ ಗೌಡ ಸೋವಿನಕೊಪ್ಪ ಉಪಸ್ಥಿತರಿದ್ದರು. `ಕಾಯಿದೆ ಪ್ರಕಾರ ಹೋರಾಟದಿಂದ ಮಾತ್ರ ಗೆಲುವು ಸಾಧ್ಯ’ ಎಂದು ಈ ವೇಳೆ ರವೀಂದ್ರ ನಾಯ್ಕ ಕರೆ ನೀಡಿದರು.
ಮುಂಡಗೋಡಿನಲ್ಲಿ ಮುಂದಿನ ಸಭೆ:
ಅರಣ್ಯ ಅತಿಕ್ರಮಣದಾರರ ಮುಂದಿನ ಸಭೆ ಅಕ್ಟೋಬರ್ 24ರ ಬೆಳಗ್ಗೆ 10 ಗಂಟೆಗೆ ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ.