ಕಾರವಾರ: ಒಂದೇ ಸೂರಿನ ಅಡಿ ಬಗೆ ಬಗೆಯ ಆಹಾರ ನೀಡುವ `ದ ಫುಡ್ ಸ್ಟ್ರೀಟ್’ಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಅಲ್ಲಿ ಮುಂಜಾನೆಯ ಉಪಹಾರ ಸೇವಿಸಿದರು. ಕೋಸ್ಟ ಕಾಫಿ ಕುಡಿದ ಅವರು ಗುಣಮಟ್ಟದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಸದಾಶಿವಗಡದ ಬೆಥನಾಯಕವಾಡ ಕ್ರಾಸಿನ ವನಿತಾ ವಿಹಾರ ಕಾಂಪ್ಲೆಕ್ಸಿನಲ್ಲಿ ಆಹಾರ ಮಳಿಗೆ ಗುರುವಾರ ಉದ್ಘಾಟನೆಯಾಗಿದೆ. `ಕೆಎಫ್‌ಸಿ, ಮಸಾಲಾ ಟ್ವಿಸ್ಟ್, ಫಿಜಾ ಹಟ್, ಕೋಸ್ಟ ಕಾಫಿ, ವಾಂಗೋ, ಇನ್ಫಿನೋ, ದಿಲ್ ಸೆ ಚಾಯ್’ ಮೊದಲಾದ ಕಂಪನಿಗಳ ತಿನಿಸು ಹಾಗೂ ಪಾನೀಯಗಳು ಇಲ್ಲಿವೆ. ಚಿಕನ್ ಖಾದ್ಯ, ಫಿಜ್ಜಾ-ಬರ್ಗರ್, ಇಡ್ಲಿ-ದೋಸಾ-ಸಮೋಸಾ, ಐಸ್ ಕ್ರೀಂ ಸೇರಿ ನಾನಾ ಬಗೆಯ ಆಹಾರಗಳು ಇಲ್ಲಿ ಸಿಗಲಿದೆ.
ಈ ಮಳಿಗೆಯನ್ನು ಗುರುವಾರ ಮಾಜಿ ಶಾಸಕಿ ರೂಪಾಲಿ ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಒಂದೇ ಸೂರಿನ ಅಡಿಯಲ್ಲಿ ಉತ್ಕೃಷ್ಟ ದರ್ಜೆಯ ವೈವಿಧ್ಯಮಯ ಆಹಾರ ಇಲ್ಲಿ ಸಿಗಲಿದೆ. ಬಗೆ ಬಗೆಯ ಸಂಯುಕ್ತವಾದ ಆಹಾರ ಮಳಿಗೆ ಸ್ಥಾಪನೆಯಿಂದ ಜನರಿಗೆ ಅನುಕೂಲವಾಗಲಿದೆ’ ಎಂದರು. 300ಕ್ಕೂ ಅಧಿಕ ಜನ ಆಗಮಿಸಿದ್ದು, ಅವರನ್ನು ಬರಮಾಡಿಕೊಂಡು ಆತಿಥ್ಯ ನೀಡಿದರು.
ನೂತನ ಉದ್ಘಾಟನೆಯಾದ ಮಳಿಗೆಗೆ ಸಂಜೆಯವರೆಗೂ ಜನ ಬರುತ್ತಿದ್ದಾರೆ. ವಿವಿಧ ಖಾದ್ಯ ಸವಿಯಲು ಸಂಜೆ ವೇಳೆ ಯುವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡರು. ಕಾರವಾರ ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ, ಅಂಕೋಲಾ ಪುರಸಭೆ ಅಧ್ಯಕ್ಷ ಸೂರಜ ನಾಯ್ಕ ಪ್ರಮುಖರಾದ ಶೀಲಾ ಶೆಟ್ಟಿ, ಶ್ರೀಧರ ನಾಯ್ಕ, ಜಾರ್ಜ ಫರ್ನಾಂಡಿಸ್, ಸೂರಜ ದೇಸಾಯಿ, ಸುರೇಂದ್ರ ಗಾಂವಕರ ಇನ್ನಿತರರು ಅಲ್ಲಿನ ಖಾದ್ಯ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಹಾರ ಮಳಿಗೆಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಉದ್ಘಾಟನೆ ವೇಳೆ ಡೊಳ್ಳು ಕುಣಿತ ಗಮನ ಸೆಳೆಯಿತು.