ಕುಮಟಾ: ತಾಲೂಕು ಆಡಳಿತ ಸೌಧದಿಂದ ಹೆಸ್ಕಾಂ’ಗೆ 4.13 ಲಕ್ಷ ರೂ ವಿದ್ಯುತ್ ಬಿಲ್ ಪಾವತಿ ಆಗಬೇಕಿದೆ. ಈ ಹಣ ಪಾವತಿಸದೇ ಇದ್ದಲ್ಲಿ ಪವರ್ ಕಟ್ ಮಾಡುವುದಾಗಿ ಹೆಸ್ಕಾಂ ಅಧಿಕಾರಿಗಳು ಕಂದಾಯ ಇಲಾಖೆಗೆ ನೋಟಿಸ್ ನೀಡಿದ್ದು, ಅದಕ್ಕೂ ಸ್ಪಂದಿಸದ ಹಿನ್ನಲೆ ಗುರುವಾರ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ.
ತಾಲೂಕು ಆಡಳಿತ ಸೌಧದ ವಿವಿಧ ವಿಭಾಗಗಳಿಂದ ಒಂದು ವರ್ಷದಿಂದ ವಿದ್ಯುತ್ ಬಿಲ್ ಪಾವತಿಯಾಗಿಲ್ಲ. ಉಪವಿಭಾಗಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ ಒಳಗೊಂಡು ಎಲ್ಲಾ ಕಚೇರಿ ಸೇರಿ 4,13,871 ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿದೆ. ಈ ಹಿನ್ನಲೆ ಹೆಸ್ಕಾಂ ಎಇಇ ರಾಜೇಶ ಮಡಿವಾಳ ನೋಟಿಸ್ ಜಾರಿ ಮಾಡಿದ್ದಾರೆ.
`ಅನೇಕ ಬಾರಿ ಮನವಿ ಮಾಡಿದರೂ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಕಂದಾಯ ಅಧಿಕಾರಿಗಳು 2 ದಿನ ಸಮಯ ಕೇಳುತ್ತಲಿದ್ದು, ಸಾಕಷ್ಟು ಬಾರಿ ಸಮಯ ನೀಡಲಾಗಿದೆ. ಅದಾಗಿಯೂ ಹಣ ಪಾವತಿ ಆಗಿರಲಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.