ಹೊನ್ನಾವರ: ವಾಹನ ಅಪಘಾತದಿಂದ ಗಾಯಗೊಂಡಿದ್ದ ಕಡವೆಗೆ ಆರು ದಿನಗಳ ಕಾಲ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶನಿವಾರ ಅಪಘಾತದಲ್ಲಿ ಗಾಯಗೊಂಡಿದ್ದ ಕಡವೆ ಗುರುವಾರ ಸಾವನಪ್ಪಿದೆ.
ಖರ್ವಾ ಕ್ರಾಸನ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ವಾಹನವೊಂದು ಗುದ್ದಿ ಕಡವೆ ಗಾಯಗೊಂಡಿತ್ತು. ಕಾಲು ಮುರಿದ ಕಡವೆ ಪೊದೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಗಾಯಗೊಂಡ ಕಡವೆಗೆ ಚಿಕಿತ್ಸೆ ನೀಡುವ ಪ್ರಯತ್ನ ನಡೆದಿತ್ತು. ನೀರು-ಮೇವು ನೀಡಿದರೂ ಕಾಡುಪ್ರಾಣಿ ಸೇವಿಸುತ್ತಿರಲಿಲ್ಲ. ಯಾರನ್ನೂ ಹತ್ತಿರ ಸುಳಿಯಲು ಸಹ ಬಿಡುತ್ತಿರಲಿಲ್ಲ. ಹೀಗಾಗಿ ಕಡವೆ ಸ್ಥಳಾಂತರ ಸಮಸ್ಯೆಯಾಗಿದ್ದು, ಪೊದೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿತ್ತು.
ಇದನ್ನೂ ಓದಿ: ನಾಯಿಗೆ ಬೆದರಿಸಿದ ಕಾಡುಪ್ರಾಣಿ!
ಅದಾದ ನಂತರ ಕಡವೆ ಅಲ್ಲಿಂದ ಬೇರೆ ಕಡೆ ಹೋಗಿದ್ದು, ಅರಣ್ಯಾಧಿಕಾರಿಗಳು ಕಡವೆಯನ್ನು ಯಾರೂ ಶಿಕಾರಿ ಮಾಡದಂತೆ ಕಣ್ಣಿಟ್ಟಿದ್ದರು. ಯಾರಾದರೂ ಹಿಂಸೆ ನೀಡಿರುವುದು ಗೊತ್ತಾದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದರು. ಆದರೆ, ಶನಿವಾರ ಆ ಕಡವೆ ಸಾವನಪ್ಪಿದ ಸುದ್ದಿ ಸಿಕ್ಕಿದೆ. ಗಾಯಗೊಂಡ ಕಡವೆ ಚೇತರಿಸಿಕೊಳ್ಳದೇ ಕಾಡಿನಲ್ಲಿ ಕೊನೆ ಉಸಿರೆಳೆದಿದೆ.
ಕತ್ತಲ ರಾತ್ರಿ ಕಡವೆಗೆ ಚಿಕಿತ್ಸೆ ನೀಡಲು ನಡೆದ ಪ್ರಯತ್ನದ ವಿಡಿಯೋ ಇಲ್ಲಿ ನೋಡಿ..