ಭಟ್ಕಳ: ಮುಟ್ಟಳ್ಳಿ ಗ್ರಾಮದ ತಲಾಂದ ಬಳಿ ಮೇವಿಗೆ ತೆರಳಿದ್ದ ಹಸುವನ್ನು ಅಪಹರಿಸಿದ ದುರುಳರು ಅದನ್ನು ಕೊಂದು ರುಂಡವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ.
ಮಂಜುನಾಥ ಸೋಮಯ್ಯ ಗೊಂಡ ಅವರಿಗೆ ಸೇರಿದ ಹಸು ಮಂಗಳವಾರ ಮೇವಿಗೆ ತೆರಳಿತ್ತು. ಆದರೆ, ಕೊಟ್ಟಿಗೆಗೆ ಮರಳಿರಲಿಲ್ಲ. ರಾತ್ರಿ ಹುಡುಕಾಡಿದರೂ ಹಸು ಕಾಣಿಸಿರಲಿಲ್ಲ. ಮರುದಿನ ಬೆಳಗ್ಗೆ ಮತ್ತೆ ನೋಡಿದಾಗ ಸಮೀಪದ ಬಾವಿಯಲ್ಲಿ ಹಸುವಿನ ತಲೆ ಭಾಗ ಕಾಣಿಸಿದೆ. ಮತ್ತಷ್ಟು ಹುಡುಕಿದಾಗ ಬಾವಿಯಲ್ಲಿಯೇ ಇನ್ನಷ್ಟು ಅವಶೇಷಗಳು ಸಿಕ್ಕಿದೆ.
ಭಟ್ಕಳದಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದ್ದು, ಮೇವಿಗೆ ತೆರಳಿದ ಹಸುವನ್ನು ವಧೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.