ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಅಜಿತ್ ನಾಯ್ಕ ಎಂಬಾತರು ಎದುರಿನಿಂದ ಬರುತ್ತಿದ್ದ ಪೊಲೀಸ್ ನಿರೀಕ್ಷಕ ಪ್ರಕಾಶ ಯಾತನೂರು ಎಂಬಾತರ ಕಾರಿಗೆ ಬೈಕ್ ಗುದ್ದಿದ್ದು, ಈ ಅಪಘಾತದಲ್ಲಿ ಬೈಕಿನ ಮೇಲೆ ಹೊರಟಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಅಜಿತ್ ಗಣಪತಿ ನಾಯ್ಕ ಹೊನ್ನಾವರದ ಹಳದಿಪುರದವರು. ಪೊಲೀಸ್ ನಿರೀಕ್ಷಕ ಪ್ರಕಾಶ ರೇವಣಸಿದ್ದಪ್ಪ ಯಾತನೂರು ಗುಲ್ಬರ್ಗಾ ಜಿಲ್ಲೆಯವರು. ನ 5ರ ಸಂಜೆ ಅಜಿತ್ ನಾಯ್ಕ ಬೈಕಿನಲ್ಲಿ ಹಳದಿಪುರದ ಅಂಗಡಿ ವ್ಯಾಪಾರಿ ನಾಗರಾಜ ರಾಮಾ ನಾಯ್ಕ ಕೂರಿಸಿಕೊಂಡು ಅಂಕೋಲಾ ಕಡೆ ಹೊರಟಿದ್ದರು.
ಬಾಳೆಗುಳಿ ಕ್ರಾಸಿನ ವರದರಾಜ ಹೊಟೇಲ್ ಬಳಿ ಪಥ ಬದಲಿಸಿದ ಬೈಕು ವಿರುದ್ಧ ದಿಕ್ಕಿನಲ್ಲಿ ಓಡಿದ್ದು, ಅಂಕೋಲಾ ಕಡೆಯಿಂದ ಕಾರವಾರ ಕಡೆ ಹೋಗುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಕಾರಿನ ಬಲಭಾಗ ಜಖಂ ಆಗಿದೆ. ಜೊತೆಗೆ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಅತಿ ವೇಗ ಅಪಘಾತಕ್ಕೆ ಕಾರಣ



