ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಸ್ವ ಉದ್ಯೋಗ ಮಾಡಲು ಆಸಕ್ತಿ ಹೊಂದಿದವರಿಗೆ ಅಂಚೆ ಇಲಾಖೆ ಅವಕಾಶವೊಂದನ್ನು ತೆರೆದಿಟ್ಟಿದೆ. ಅಂಚೆ ಜೀವ ವಿಮೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ವಿಮಾ ಸೇವೆ ಒದಗಿಸುವ ಮೂಲಕ ಆದಾಯಗಳಿಸುವ ದಾರಿಯನ್ನು ಅಂಚೆ ಇಲಾಖೆ ಕಲ್ಪಿಸಿದೆ. ಜೀವ ವಿಮೆ ಸಲಹೆಗಾರರು ಹಾಗೂ ಫಿಲ್ಡ್ ಆಫಿಸರ್ ಹುದ್ದೆಗಾಗಿ ಅಂಚೆ ಇಲಾಖೆ ನೇಮಕಾತಿ ಮಾಡಿಕೊಳ್ಳುತ್ತಿದೆ.
ವಿಮಾ ಸಲಹೆಗಾರರಾಗಲು ಕನಿಷ್ಟ 18 ಮೇಲ್ಪಟ್ಟವರಾಗಿರಬೇಕು. ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು ಸಹ ಈ ಕೆಲಸ ಮಾಡಬಹುದು. ವಿಮಾ ಕಂಪನಿಗಳ ಮಾಜಿ ಸಲಹೆಗಾರರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ಮಾಜಿ ಸೈನಿಕರು ಸೇರಿ ಅಂಚೆ ಇಲಾಖೆಯವರಿಗೆ ಸಮಂಜಸ ಎಂದು ಕಾಣುವ ಎಲ್ಲರಿಗೂ ಅವಕಾಶವಿದೆ.
ಫಿಲ್ಡ್ ಆಫಿಸರ್ ಹುದ್ದೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿವೃತ್ತರಾಗಬೇಕು. ಕನಿಷ್ಟ 5 ಸಾವಿರ ರೂ ಕಿಸಾನ್ ವಿಕಾಸ ಪತ್ರದಲ್ಲಿ ಹೂಡಿಕೆ ಮಾಡಬೇಕು ಎಂಬ ನಿಯಮವಿದೆ. ಈ ಎರಡು ಹುದ್ದೆಗಳಿಗೆ ಅರ್ಹರೆನಿಸಿ ಅರ್ಜಿ ಸಲ್ಲಿಸಲು ಆಸಕ್ತರಾಗಿರುವವರು ಸ್ವವಿವರ, ಭಾವಚಿತ್ರ, SSLC ಅಂಕಪಟ್ಟಿ ಜೊತೆ ನವೆಂಬರ್ 13ರ ಬೆಳಗ್ಗೆ 11ಗಂಟೆಗೆ ಶಿರಸಿ ಹೊಸ ಮಾರುಕಟ್ಟೆ ಆವರಣದಲ್ಲಿರುವ ಶಿರಸಿ ಅಂಚೆ ಅಧೀಕ್ಷಕರ ಕಚೇರಿಗೆ ಬರಬಹುದು. ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
#S News Digitel Advertisement: ಕಂಪ್ಯುಟರ್ ಕೌಶಲ್ಯ ಗೊತ್ತಿರುವವರಿಗೆ ಇಲ್ಲ ಉದ್ಯೋಗ ಅಲೆದಾಟ: ಕಂಪ್ಯುಟರ್ ತರಗತಿ ಸೇರಲು ಫೋನ್ ಮಾಡಿ: 9483490345 (ಯಶಸ್ವಿ ಕಂಪ್ಯುಟರ್, ಯಲ್ಲಾಪುರ)



