ಶಿರಸಿ: ಆಕಸ್ಮಿಕ ಅಗ್ನಿ ಅವಘಡದ ಪರಿಣಾಮ ಬಡ ಕುಟುಂಬ ಬೀದಿಗೆ ಬಿದ್ದಿದೆ. ತಡರಾತ್ರಿ ನಡೆದ ದುರಂತದಲ್ಲಿ ನಾಗವೇಣಿ ಉಪ್ಪಾರ್ ಎಂಬಾತರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಶಿರಸಿಯ ಗಿಡಮಾವಿನಕಟ್ಟೆ ಬಳಿ ನಾಗವೇಣಿ ಮಹೇಶ ಉಪ್ಪಾರ್ ತಮ್ಮ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಮಂಗಳವಾರ ರಾತ್ರಿ ಅವರ ಮನೆ ಹೊತ್ತಿ ಉರಿದಿದ್ದು, ಮನೆಯಲ್ಲಿ ಮಲಗಿದವರೆಲ್ಲರೂ ಹೊರಗೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ.
ಈ ದುರಂತದಲ್ಲಿ ಮೂವರು ಮಕ್ಕಳ ವಿದ್ಯಾಬ್ಯಾಸದ ದಾಖಲೆ, ಮನೆಯಲ್ಲಿದ್ದ ಬಂಗಾರದ ಒಡವೆ, ಸಾಲ ಮಾಡಿ ತಂದಿದ್ದ ಹಣ, ನಿತ್ಯದ ಬಟ್ಟೆಗಳ ಜೊತೆ ದಿನಸಿ ಸಾಮಗ್ರಿಗಳು ಸಹ ಸುಟ್ಟು ಕರಕಲಾಗಿವೆ. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ.
ವಿದ್ಯಾರ್ಥಿನಿಗೆ ವೈಯಕ್ತಿಕ ನೆರವು
ಅಗ್ನಿ ಅವಘಡದ ಬಗ್ಗೆ ಅರಿತ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಗಿಡಮಾವಿನಕಟ್ಟೆಗೆ ತೆರಳಿ ಪರಿಶೀಲಿಸಿದರು. ಕಾಲೇಜು ವಿದ್ಯಾಬ್ಯಾಸಕ್ಕಾಗಿ ತಂದಿರಿಸಿದ್ದ ಹಣ ಅಗ್ನಿಗಾಹುತಿಯಾದ ವಿಷಯ ಕೇಳಿದ ಅವರು ತಕ್ಷಣ ತಮ್ಮ ಜೇಬಿನಲ್ಲಿದ್ದ 40 ಸಾವಿರ ರೂ ಹಣವನ್ನು ವಿದ್ಯಾರ್ಥಿನಿಗೆ ನೀಡಿದರು.
ಅಗ್ನಿ ಅವಘಡದಿಂದ ಕರಕಲಾದ ಮನೆಯ ವಿಡಿಯೋ ಚಿತ್ರಣ ಇಲ್ಲಿ ನೋಡಿ..



